ಕರ್ನಾಟಕ

ನಿರ್ಭಯಾ ತಾಯಿ ಫಿಸಿಕ್‌ ಇಷ್ಟು ಚೆನ್ನಾಗಿದ್ದರೆ, ಇನ್ನು ನಿರ್ಭಯಾ ಇನ್ನೆಷ್ಟು ಚೆಂದ ಇದ್ದಳೋ: ಸಾಂಗ್ಲಿಯಾನ

Pinterest LinkedIn Tumblr


ಬೆಂಗಳೂರು: ತಮ್ಮ ಖಡಕ್‌ ಕಾರ್ಯವೈಖರಿ ಮೂಲಕ ಸಾಕಷ್ಟು ಹೆಸರು ಗಳಿಸಿದ್ದ ಮಾಜಿ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನ ಈಗ ವಿವಾದ ಸುಳಿಯಲ್ಲಿ ಸಿಲುಕಿದ್ದಾರೆ.

ಅದು ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದ ಮಹಿಳಾ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲೇ ಮಹಿಳೆಯ ಕುರಿತು ಅವಹೇಳನ ಹೇಳಿಕೆ ನೀಡಿ ಸಾಂಗ್ಲಿಯಾನ ವಿವಾದಕ್ಕೀಡಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕಾಮುಕರಿಂದ ಭೀಕರವಾಗಿ ಅತ್ಯಾಚಾರಕ್ಕೀಡಾಗಿ, ಅಮಾನುಷವಾಗಿ ಕೊಲೆಗೀಡಾದ ನಿರ್ಭಯಾ ಬಗ್ಗೆ ಸಾಂಗ್ಲಿಯಾನ ಹೇಳಿಕೆ ನೀಡಿದ್ದಾರೆ.

ಸನ್ಮಾನ ಸಮಾರಂಭದಲ್ಲಿ ನಿರ್ಭಯಾ ಅವರ ತಾಯಿ ಕೂಡ ಹಾಜರಿದ್ದರು.

ಈ ಸಂದರ್ಭದಲ್ಲಿ ಭಾಷಣ ಮಾಡಿದ ಸಾಂಗ್ಲಿಯಾನ, ಈಕೆಯ (ನಿರ್ಭಯಾ ತಾಯಿ) ಫಿಸಿಕ್‌ ಇಷ್ಟು ಚೆನ್ನಾಗಿದ್ದರೆ, ಇನ್ನು ನಿರ್ಭಯಾ ನಿನ್ನೆಷ್ಟು ಚೆಂದ ಇರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು ಸಾಂಗ್ಲಿಯಾನ.

ನಂತರ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನೂ ಸಾಂಗ್ಲಿಯಾನ ನೀಡಿದ್ದಾರೆ.

ಒಂದು ವೇಳೆ ಮಹಿಳೆಯರ ಮೇಲೆ ಯಾರಾದರೂ ದೌರ್ಜನ್ಯ ಮಾಡಲು ಬಂದರೆ ಅವು ನಿಮಗಿಂತ ಶಕ್ತಿಶಾಲಿಯಾಗಿದ್ದರೆ, ಸುಮ್ಮನ್ನೆ ಶರಣಾಗಿ ಅವರು ಹೇಳಿದಂತೆ ಕೇಳಿಕೊಂಡಿರಿ. ಆಗ ಕೊಲೆಯಾಗುವುದನ್ನಾದರೂ ತಪ್ಪಿಸಬಹುದು ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ವಿವಾದ ಸೃಷ್ಟಿಸಿದ ನಂತರ ಸಾಂಗ್ಲಿಯಾನ ಅವರನ್ನು ಸಂಪರ್ಕಿಸಿದಾಗ, ಅವರು ಹೇಳಿದ್ದು ಇಷ್ಟು. ಇದು ಮಹಿಳೆಯರನ್ನು ಹೀಯ್ಯಾಳಿಸಲು ಹೇಳಿದ್ದಲ್ಲ. ಅವರಿಗೆ ಅಭಿನಂದಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರು ಎಷ್ಟು ಅಪಾಯಕ್ಕೀಡಾಗುತ್ತಾರೆ ಎಂಬುದನ್ನು ತಿಳಿಸಲು ಈ ರೀತಿ ಹೇಳಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

Comments are closed.