ಮನೋರಂಜನೆ

ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ

Pinterest LinkedIn Tumblr


2003ರಲ್ಲಿ ಮಾನವ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿಗೆ ಪಾಟಿಯಾಲಾ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು.

ದಲೇರ್ ಮೆಹಂದಿ ಮತ್ತವರ ಸಹೋದರ ಶಂಶೀರ್ ಸೇರಿದಂತೆ ಹಲವರು ವಿದೇಶಗಳಿಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದರು ಎಂಬ ಆರೋಪ ಅವರ ಮೇಲಿದೆ. ಸಂಗೀತ ಕಾರ್ಯಕ್ರಮ ನಡೆಸಿಕೊಡಲು ವಿದೇಶಕ್ಕೆ ಹೋಗುವಾಗ ತಮ್ಮ ತಂಡವರೆಂದು ಹೇಳಿ ಮಾವನ ಕಳ್ಳ ಸಾಗಣೆ ಮಾಡುತ್ತಿದ್ದರು. ಇದಕ್ಕಾಗಿ ತಮ್ಮ ಬಳಿ ಒಂದು ಕೋಟಿ ಪಡೆದಿದ್ದು, ಆ ಹಣವನ್ನು ಹಿಂತಿರುಗಿಸಿಲ್ಲ ಎಂದು ದೂರುದಾರರು ಮೆಹಂದಿ ವಿರುದ್ಧ ಆರೋಪಿಸಿದ್ದಾರೆ.

1998 ಮತ್ತು 1999ರಲ್ಲಿ ಮೆಹಂದಿ ಸಹೋದರ ಯುಎಸ್‌ಗೆ ಎರಡು ತಂಡಗಳನ್ನು ಕರೆದೊಯ್ದಿದ್ದು ಕಾನೂನು ಬಾಹಿರವಾಗಿ ಅಲ್ಲೇ 10 ಮಂದಿಯನ್ನು ಬಿಟ್ಟುಬಂದಿದ್ದ ಎಂಬ ಆರೋಪ ಇದೆ. ಪಾಟಿಯಾಲ ಜಿಲ್ಲೆ ಬಲ್‌ಬೀರಾ ಗ್ರಾಮದ ಬಕ್ಷೀಶ್ ಸಿಂಗ್ ಎಂಬುವವರು 2003ರಲ್ಲಿ ಪಾಟಿಯಾಲ ಸರ್ದಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆಗ ದಲೇರ್‌ರನ್ನು ಬಂಧಿಸಿ ಕೆಲ ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Comments are closed.