ಕರ್ನಾಟಕ

ಈ ಹಾರದ ಬೆಲೆ 50 ಸಾವಿರ ರೂ.!

Pinterest LinkedIn Tumblr


ಮಂಡ್ಯದಲ್ಲಿ ಗುರುವಾರ ಸಂಧಾನ ರಾಜಕಾರಣ ನಡೆಯಿತು. ಶ್ರೀರಂಗಪಟ್ಟಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಸಚ್ಚಿದಾನಂದ ಅವರನ್ನು ಮನವೊಲಿಸುವ ಸಲುವಾಗಿ ಸಂಧಾನಕಾರರಾಗಿ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮಕ್ಕೆ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್‌ ಅವರ ಕೊರಳಿಗೆ 3 ಕ್ವಿಂಟಾಲ್‌ ಸೇಬಿನ ಹಾರವನ್ನು ಕ್ರೇನ್‌ ಮೂಲಕ ಹಾಕಲಾಯಿತು. ಇದೇವೇಳೆ ಜೆಸಿಬಿಯಲ್ಲಿ ಕೂತು ಹೂವಿನ ಮಳೆ ಕೂಡ ಸುರಿಸಲಾಯಿತು. ಇದು ಸಚ್ಚಿದಾನಂದ ಅವರ ಬೆಂಬಲಿಗರು ಯಶಸ್ವಿ ಸಂಧಾನ ಕೋರಿ ಮಾಡಿದ ಸನ್ಮಾನವಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

-ಉದಯವಾಣಿ

Comments are closed.