ಕರ್ನಾಟಕ

ಚ್ಯೂಯಿಂಗ್ ಗಮ್ ಬಾಯಲ್ಲಿಟ್ಟು ಮಲಗಿದ್ದ ಬಾಲಕಿ ಸಾವು !

Pinterest LinkedIn Tumblr

ಹಾವೇರಿ: ಚ್ಯೂಯಿಂಗಮ್‌ ತಿಂದು ಮಲಗಿದ ಬಾಲಕಿಯೊಬ್ಬಳು ಚ್ಯೂಯಿಂಗಮ್‌ ಗಂಟಲಲ್ಲಿ ಸಿಕ್ಕಿದ ಪರಿಣಾಮ ಮೃತಪಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ಹಾವೇರಿಯ ಗುತ್ತಲ ಗ್ರಾಮದ ನಿವಾಸಿಯಾದ ಗೌರಮ್ಮ ಗಂಗಣ್ಣನವರ್(14) ಎಂದು ಗುರುತಿಸಲಾಗಿದೆ. ರಾತ್ರಿ ಊಟ ಮಾಡಿ ಮಲಗಲು ತೆರಳಿದ ಗೌರಮ್ಮ ಅಂಗಡಿಯಿಂದ ತಂದ ಚ್ಯೂಯಿಂಗಮ್‌ ಜಗಿಯುತ್ತಾ ಹಾಗೆಯೇ ನಿದ್ರೆಗೆ ಜಾರಿದ್ದಾಳೆ.ನಿದ್ದೆಯಲ್ಲಿ ಕೆಮ್ಮಿದಾಗ ಅದು ಗಂಟಲಲ್ಲಿ ಸಿಕ್ಕಿಕೊಂಡಿದೆ. ಕೆಮ್ಮಿನೊಂದಿಗೆ ರಕ್ತದ ವಾಂತಿ ಮಾಡಿಕೊಂಡಿದ್ದು, ಗೌರಮ್ಮ ಅಸ್ವಸ್ಥಳಾಗಿದ್ದಾಳೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಕಲಿಸಲಾಗಿದೆ.

ಆದರೆ ಹೀಗೆ ಆಸ್ಪತ್ರೆಗೆ ದಾಕಲಿಸುವಾಗಲೇ ಮಾರ್ಗ ಮಧ್ಯ ಮೃತಪಟ್ಟಿದ್ದಾಳೆ. ಚ್ಯೂಯಿಂಗಮ್‌ ಆಕೆಯ ಶ್ವಾಸನಾಳ, ಅನ್ನನಾಳಗಳಲ್ಲಿ ಸಿಲುಕಿಕೊಂಡಿತ್ತು. ಇದೇ ಕಾರಣಕ್ಕೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಗೌರಮ್ಮನ ಕುಟುಂಬದವರು ಹೇಳಿದ್ದಾರೆ.

Comments are closed.