ಕರ್ನಾಟಕ

ಅಹಮದಾಬಾದ್ ಎಫ್‌ಎಸ್‌ಎಲ್‌ನಲ್ಲಿ ನಡೆಯಲಿದೆ ನವೀನ್ ಮಂಪರು ಪರೀಕ್ಷೆ!

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನವೀನ್ ಅಲಿಯಾಸ್ ಹೊಟ್ಟೆ ಮಂಜನಿಗೆ ಅಹಮದಾಬಾದ್ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಕೇಂದ್ರದಲ್ಲಿ ಮಂಪರು ಪರೀಕ್ಷೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

ನವೀನ್‌ಗೆ ಕೋರ್ಟ್ ಮಂಪರು ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಅಹಮದಾಬಾದ್ ಎಫ್‌ಎಸ್‌ಎಲ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮಂಪರು ಪರೀಕ್ಷೆಗೆ ದಿನ ನಿಗದಿಪಡಿಸುವಂತೆ ಕೋರಿ ಎಸ್‌ಐಟಿ ಅಧಿಕಾರಿಗಳು ಬರೆದಿದ್ದಾರೆ. ನವೀನ್ ಒಪ್ಪಿಗೆ ಮೇಲೆ ಮತ್ತು ಕೋರ್ಟ್ ಆದೇಶದ ಅನುಸಾರ ಮಂಪರು ಪರೀಕ್ಷೆ ನಡೆಸಬೇಕಿದೆ ಎಂದು ದಾಖಲೆಗಳೊಂದಿಗೆ ಪತ್ರ ಬರೆಯಲಾಗಿದೆ.

ಅಹಮದಾಬಾದ್ ಎಫ್‌ಎಸ್‌ಎಲ್ ಅಧಿಕಾರಿಗಳು ಎಸ್‌ಐಟಿ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ದಿನ ನಿಗದಿಪಡಿಸಿದ ನಂತರ ಅಧಿಕಾರಿಗಳು ಹೊಟ್ಟೆ ಮಂಜನನ್ನು ಅಹಮದಾಬಾದ್‌ಗೆ ಕರೆದೊಯ್ಯಲಿದ್ದಾರೆ. ಅಹಮದಾಬಾದ್‌ನಲ್ಲಿರುವ ವಿಧಿವಿಜ್ಞಾನ ಕೇಂದ್ರದಲ್ಲಿ ಹೊಟ್ಟೆ ಮಂಜನ ಮಂಪರು ಪರೀಕ್ಷೆ ನಡೆಯಲಿದೆ.

Comments are closed.