ರಾಷ್ಟ್ರೀಯ

ವಾಟ್ಸಾಪ್‌ನಲ್ಲಿ ಸಿಬಿಎಸ್‍ಇ ಕ್ಲಾಸ್ 12 ಅಕೌಂಟೆನ್ಸಿ ಪ್ರಶ್ನೆಪತ್ರಿಕೆ ಲೀಕ್

Pinterest LinkedIn Tumblr


ಹೊಸದಿಲ್ಲಿ: ವಾಟ್ಸಾಪ್ ಮೂಲಕ ಸಿಬಿಎಸ್‍ಇ ಕ್ಲಾಸ್ 12 ಅಕೌಂಟೆನ್ಸಿ ಪ್ರಶ್ನೆಪತ್ರಿಕೆ ಗುರುವಾರ ಲೀಕ್ ಆಗಿದೆ. ಬಹಿರಂಗವಾಗಿರುವ ಪ್ರಶ್ನೆಪತ್ರಿಕೆ ಎಲ್ಲಾ ರೀತಿಯಲ್ಲೂ ಹೊಂದಾಣಿಕೆಯಾಗಿದೆ ಎಂದಿವೆ ಮೂಲಗಳು.

ಪ್ರಶ್ನೆಪತ್ರಿಕೆ ಹೇಗೆ ಬಹಿರಂಗವಾಯಿತು ಎಂಬ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಲಿರುವುದಾಗಿ ತಿಳಿಸಿದೆ. ಈ ಬಗ್ಗೆ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಟ್ವೀಟ್ ಮಾಡಿದ್ದು, ‘ಸಿಬಿಎಸ್‍ಇ ನಿರ್ಲಕ್ಷ್ಯದಿಂದ ಆಗಿರುವ ತೊಂದರೆಗೆ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳು ಆತಂಕಪಡಬೇಕಾಗಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಸಿಬಿಎಸ್‍ಇ ಕ್ಲಾಸ್ 12 ಪರೀಕ್ಷೆಗಳು ಮಾರ್ಚ್ 5ರಿಂದ ಆರಂಭವಾಗಿವೆ.

Comments are closed.