ಕರ್ನಾಟಕ

ಅಂಗಡಿ, ಹೋಟೆಲ್, ಮಾಲ್‌ಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ!

Pinterest LinkedIn Tumblr


ಬೆಂಗಳೂರು: ನಗರದ ಅಂಗಡಿ, ಹೋಟೆಲ್ ಮತ್ತು ಮಾಲ್‌ಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯವಾಗಿ ಬಳಸಿ ಶೇ.40 ರಷ್ಟು ಅನ್ಯ ಭಾಷೆ ಬಳಸಬಹುದು. ಈ ಬಗ್ಗೆ ಒಂದು ತಿಂಗಳೊಳಗಾಗಿ ಬಿಬಿಎಂಪಿಗೆ ಮಾಹಿತಿ ನೀಡಬೇಕು ಇಲ್ಲದಿದ್ದಲ್ಲಿ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದರು.

ಬಿಬಿಎಂಪಿ ಆಯವ್ಯಯ ಚರ್ಚೆಯ ಮೇಲೆ ಆಯುಕ್ತರು ಸೋಮವಾರ ಉತ್ತರ ನೀಡುವ ವೇಳೆ, ಈ ವಿಷಯವನ್ನು ಪ್ರಸ್ತಾಪಿಸಿ ರಾಜ್ಯ ಸರಕಾರ ಈ ಕ್ರಮವನ್ನು ಜಾರಿಗೊಳಿಸಿ ಎಂದು ತಿಳಿಸಿದ್ದರೂ ಎಲ್ಲರು ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದ್ದರಿಂದ ಎಲ್ಲ ನಾಮ ಫಲಕಗಳಲ್ಲಿ ಕನ್ನಡ ಬಳಕೆ ಮಾಡಲಾಗಿದೆ. ಇದನ್ನು ಒಂದು ತಿಂಗಳೊಳಗಾಗಿ ಪಾಲಿಕೆಗೆ ಮಾಹಿತಿ ನೀಡಬೇಕು ಇಲ್ಲದಿದ್ದಲ್ಲಿ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.

Comments are closed.