ಕರ್ನಾಟಕ

ದ್ವೇಷ ಸೃಷ್ಟಿಸುವ ಮೂಲಕ ದೇಶ ಕಟ್ಟುತ್ತೇವೆಂಬ ಕೂಗು ಹೆಚ್ಚಿದೆ: ಬರಗೂರು

Pinterest LinkedIn Tumblr


ಬೆಂಗಳೂರು : ಒಗ್ಗಟ್ಟಾಗಿ ಸೇರಿ ದೇಶಕ್ಕಾಗಿ ದುಡಿಯುವ ಬದಲು ಒಬ್ಬರ ಮೇಲೊಬ್ಬರು ದ್ವೇಷ ಸೃಷ್ಟಿಸುವ ಮೂಲಕ ದೇಶ ಕಟ್ಟುತ್ತೇವೆ ಎಂಬ ಕೂದು ಹೆಚ್ಚಾಗುತ್ತಿದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯದ ನಲವತ್ತರ ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿ, 70ದಶಕದಲ್ಲಿ ಎಲ್ಲ ಪ್ರಗತಿಪರ ಚಿಂತಕರು ಒಗ್ಗೂಡಿ ಆರಂಭಿಸಿದ ಈ ಬಂಡವಾಳಶಾಯಿ ವೇದಿಕೆಯು 21ನೇ ಶತಮಾನದಲ್ಲಿ ದೇಶದ ಒಗ್ಗಟಿಗಾಗಿ ಮತ್ತೆ ಹೋರಾಡಬೇಕಾದ ಪ್ರಸಂಗ ಸೃಷ್ಟಿಯಾಗಿದೆ. ವಿವಿಧ ಸಾಂಸ್ಕೃತಿಕ ವೈಭವವನ್ನು ನಮ್ಮ ದೇಶದಲ್ಲಿ ಒಂದು ಧರ್ಮದ ಏಳಿಗೆಯನ್ನು ಮತ್ತೊಂದು ಧರ್ಮದದವರು ಸಹಿಸಲಾಗದ ಸ್ಥಿತಿಯನ್ನು ತಲುಪಿದೆ. ಹಿಂದೆ ತಮ್ಮ ದೇಶಕ್ಕಾಗಿ ರಕ್ತ ನೀಡಲು ಮುಂದಾಗುತ್ತಿದ್ದ ಪ್ರಜೆಗಳನ್ನು ಹೊಂದಿದ್ದ ಭಾರತ ಇಂದು ತಮ್ಮ ಧರ್ಮಕ್ಕಾಗಿ ರಕ್ತ ಹರಿಸಲು ಮುಂದಾಗಿರುವ ಪ್ರಜೆಗಳನ್ನು ಹೊಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

Comments are closed.