
ಚಿತ್ರದುರ್ಗ: ದಲಿತ ಸಂಘರ್ಷ ಸಮಿತಿ ಮುಖಂಡನಿಂದ ದಲಿತ ಸಮುದಾಯದ ತಹಸೀಲ್ದಾರ್ ಮೇಲೆ ದೌರ್ಜನ್ಯ ಮಾಡಿರುವುದಲ್ಲದೆ ಜಾತಿ ನಿಂಧನೆ ಮಾಡಿರುವ ಆಡಿಯೋ ಜಿಲ್ಲಾಧ್ಯಂತ ವೈರಲ್ ಸೃಷ್ಟಿಸಿದೆ.
ಚಳ್ಳಕೆರೆ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯಾಗಿರುವ ಟಿ.ಸಿ. ಕಾಂತರಾಜ್ ಅವರಿಗೆ ಕರೆ ಮಾಡಿರುವ ಚಳ್ಳಕೆರೆ ನಗರಸಭೆ ಸದಸ್ಯ ಹಾಗೂ ಡಿಎಸ್ಎಸ್ ಮುಖಂಡ ಶಿವಮೂರ್ತಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ತಹಸೀಲ್ದಾರ ಹೆಸರಿಡಿದು ಜಡ್ಜ್ ಏನೋ ನೀನೂ ಎಂದು ನಿಂಧಿಸುತ್ತಾ ಸಚಿವ ಆಂಜನೇಯ ಸೂಳೆಮಗ ಹಾಗೂ ಶಾಸಕ ರಘುಮೂರ್ತಿ ಸೂಳೆಮಗ ಎಂದು ಎಗ್ಗಿಲ್ಲದೆ ಬೈದಾಡುತ್ತಾ. ಲೇ ಕೊರಚ, ಲೇ ಕೊರಚ ಎಂದು ನಿಂಧಿಸಿ ದಮ್ಮಿದ್ರೇ ಅರೆಸ್ಟ್ಮಾ ಡೋ ನೋಡೋಣ ಎಂದೆಲ್ಲ ನಿಮ್ಮಪ್ಪಗೆ ಹುಟ್ಡಿದ್ರೆ ಜೈಲಿಗೆ ಕಳಿಸೋ ಎಂದು ಆತ್ಮಸ್ಥೈರ್ಯ ಕುಂದಿಸುವ ಮಾತನಾಡಿದ್ದು ಕೊರಚರು, ಸರಕಾರಿ ನೌಕರರು ಬುಗಿಲೇಳುವಂತೆ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದು ಸೋಮವಾರ ಸೂಕ್ತ ಕ್ರಮಕ್ಕೆ ಮುಂದಾಗಲಿದ್ದಾರೆ.
ದಲಿತರಿಂದ ದಲಿತರಿಗೆ ಈ ಪರಿ ದೌರ್ಜನ್ಯ ಚಿತ್ರದುರ್ಗದಲ್ಲಿ ಹೊಸತಲ್ಲ. ಈಗ ಆದಿ ಕರ್ನಾಟಕ ಎಂದು ಹೇಳಿಕೊಂಡು ಕೊರಚರಿಗೆ ಹೀಗೆ ಮಾತನಾಡಿರುವುದು ಕೊರಚರ ಆಕ್ರೊಶಕ್ಕೆ ಕಾರಣವಾಗಿದೆ. ನೀನೇ ಸಾಕಿದ ಗಿಣಿ ಎಂಬಂತೆ ಆಂಜನೇಯ ಮಾದಿಗ ಸಮುದಾಯಕ್ಕೆ ಶಕ್ತಿಗೆ ತುಂಬಿದ್ದಾರೆ. ಸಚಿವ ಆಂಜನೇಯಗೆ ಮಾದಿಗರೇ ಹೀಗೆ ಮಾತನಾಡಿರುವು ಕೈ ಪಾಳಯದಲ್ಲಿ ಕಂಗಾಲು ಸೃಷ್ಟಿಸಿದೆ. ಒಟ್ಟಾರೆ ದಲಿತ ಅಧಿಕಾರಿ ಅದರಲ್ಲೂ ತಾಲೂಕು ದಂಡಾಧಿಕಾರಿಗೆ ಈ ರೀತಿ ಮಾತನಾಡಿರುವುದು ಅನೇಕ ಅಧಿಕಾರಿಗಳು ಕೆರಳುವಂತೆ ಮಾಡಿದೆ.
Comments are closed.