
ಆನೇಕಲ್: ಇಲ್ಲಿನ ನಾರಾಯಣಘಟ್ಟ ಗ್ರಾಮದ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ದಿಢೀರ್ ನೆಲಕ್ಕೆ ಉರುಳಿದೆ.
ಸುಮಾರು 75 ಅಡಿ ಎತ್ತರವಿರುವ ಈ ತೇರು ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಜಾತ್ರೆ ನಿಮಿತ್ತ ಸುತ್ತಲಿನ 10 ಗ್ರಾಮಗಳ ಭಕ್ತರು ಸೇರಿ ತೇರು ನಿರ್ಮಾಣ ಮಾಡಿದ್ದರು.
ಪ್ರತಿ ಸಲವೂ ತೇರು ನಿರ್ಮಾಣ ಮಾಡಿ ಎಳೆಯುವುದು ಇಲ್ಲಿನ ಸಂಪ್ರದಾಯ. ತೇರು ನಿರ್ಮಾಣ ಮಾಡಿದ ಬಳಿಕ ಎತ್ತುಗಳ ಸಹಾಯದಿಂದ ಎಳೆದು ತರಲಾಗುತ್ತಿತ್ತು. ಹೆಚ್ಚು ಎತ್ತರವಿದ್ದ ಕಾರಣ ಉರುಳಿ ಬಿದ್ದಿದೆ.
Comments are closed.