ಕರ್ನಾಟಕ

ಯುಬಿ ಸಮೂಹದ ಆಸ್ತಿಯ ಮೌಲ್ಯ 12,400 ಕೋಟಿ ರು: ವಿಜಯ್‌ ಮಲ್ಯ ಸಾಲ ತೀರಲು ಬೇಕಾದಷ್ಟು

Pinterest LinkedIn Tumblr


ಬೆಂಗಳೂರು: ಉದ್ದೇಶಿತ ಸುಸ್ಥಿದಾರ ವಿಜಯ್‌ ಮಲ್ಯ ಒಡೆತನದ ಯುಬಿ ಸಮೂಹದ ಒಟ್ಟಾರೆ ಮೌಲ್ಯ 12,400 ಕೋಟಿ ರುನಷ್ಟಿದ್ದು ಆತನ ಸಾಲವನ್ನು ಪೂರ್ಣವಾಗಿ ತೀರಿಸಲು ಇದು ಬೇಕಾದಷ್ಟಾಗಿದೆ ಎಂದು ಸಂಸ್ಥೆ ಕರ್ನಾಟಕ ಹೈಕೋರ್ಟ್‌‌ಗೆ ತಿಳಿಸಿದೆ.

ಇದರಲ್ಲಿ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಮೇಲಿರುವ 6,000 ಕೋಟಿ ರುಗಳನ್ನು ಬಡ್ಡಿ ಸಮೇತ ತೀರಿಸಬಹುದಾಗಿದೆ. ನಿಷ್ಕ್ರಿಯ ವಿಮಾನಯಾನ ಸಂಸ್ಥೆಗೆ ಸಾಲ ಪಡೆಯಲು ಯುಬಿ ಸಮೂಹವನ್ನು ಕಾರ್ಪೋರೇಟ್‌ ಗ್ಯಾರಂಟಿಯಾಗಿ ನೀಡಲಾಗಿತ್ತು. ಕಂಪನಿಯ ಆಸ್ತಿ ಹಾಗು ಶೇರುಗಳ ವಿವರಗಳನ್ನು ಜಾರಿ ನಿರ್ದೇಶನಾಲಯ ಹಿಡಿತಕ್ಕೆ ಪಡೆದಿದ್ದು ಸಂಸ್ಥೆಯನ್ನು ಆರ್ಥಿಕವಾಗಿ ಬಲಹೀನವಾಗಿಸಿದೆ ಎಂದು ಕೋರ್ಟ್‌ನಲ್ಲಿ ತಿಳಿಸಲಾಗಿದೆ.

ಈ ಕುರಿತು ನ್ಯಾಯಾಲಯಕ್ಕೆ ವಿವರಣೆ ನೀಡಿದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಸಂಸ್ಥೆಯ ಆಸ್ತಿಯ ಮೌಲ್ಯ 13,400 ಕೋಟಿ ರುನಷ್ಟಿದ್ದು ಮಾರುಕಟ್ಟೆ ಏರಿಳೀತದ ಕಾರಣ 12,400 ಕೋಟಿರುಗೆ ಇಳಿಕೆ ಕಂಡಿದೆ. ಇದೇ ವೇಳೆ ಎಲ್ಲ ಮಲ್ಯ ತೀರಿಸಬೇಕಿರುವ ಒಟ್ಟಾರೆ ಸಾಲದ ಮೊತ್ತ 10,000 ಕೋಟಿ ರು ದಾಟುವುದಿಲ್ಲ ಎಂದು ಜನವರಿಯಲ್ಲಿ ಹೇಳಿದ್ದರು.

Comments are closed.