ಕರ್ನಾಟಕ

ಹಾಸನ: ಒಂದೇ ಹಳಿ ಮೇಲೆ ಎರಡು ರೈಲು, ತಪ್ಪಿದ ದುರಂತ!

Pinterest LinkedIn Tumblr


ಹಾಸನ: ಹೊಳೆನರಸೀಪುರದ ರೈಲ್ವೇ ನಿಲ್ದಾಣಕ್ಕೆ ಮೈಸೂರು ಹಾಗೂ ಅರಸಿಕೆರೆಯ ರೈಲುಗಳೆರಡು ಒಂದೇ ಹಳಿಯ ಮೇಲೆ ಬಂದಿದ್ದು, ಚಾಲಕರ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹದಾಗಿದ್ದ ದೊಡ್ಡ ದುರಂತ ತಪ್ಪಿದೆ.

ಮಾಹಿಗಳ ಪ್ರಕಾರ, ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ರೈಲು ಹಾಗೂ ಅರಸೀಕೆರೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಮಗದೊಂದು ರೈಲು ಹೊಳೆನರಸೀಪುರ ರೈಲ್ವೆ ನಿಲ್ದಾಣದ ಒಂದೇ ಹಳಿಗೆ ಬಂದಿದೆ. ರೈಲುಗಳ ಮುಖಾಮುಖಿಯನ್ನು ಗಮನಿಸಿದ ಎರಡೂ ಚಾಲಕರು ಕೂಡಲೇ ಬ್ರೇಕ್‌ ಹಾಕಲು ಯತ್ನಿಸಿದ್ದಾರೆ, ಪರಿಣಾಮ ಎರಡೂ ರೈಲು ಕೇವಲ 50 ಮೀ. ಅಂತರದಲ್ಲಿ ನಿಂತಿವೆ. ಯಾವುದೇ ಒಂದು ರೈಲು ವೇಗವಾಗಿ ಚಲಿಸುತ್ತಿದ್ದರೂ ಸಂಭಿವಸಬಹುದಾದ ಅಪಘಾತವನ್ನು ಊಹಿಸಲೂ ಸಾಧ್ಯವಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.

ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ದೇಶಾಧ್ಯಂತ ಎಂಟು ಭೀಕರ ರೈಲು ಅಪಘಾತಗಳು ಸಂಭವಿಸಿತ್ತು,

Comments are closed.