ಕರ್ನಾಟಕ

ಬರ ಪರಿಸ್ಥಿತಿಗೆ ತುತ್ತಾದ ರೈತರಿಗೆ ಪರಿಕರ ಸಹಾಯಧನ: ಕೃಷ್ಣಬೈರೇಗೌಡ

Pinterest LinkedIn Tumblr


ಬೆಂಗಳೂರು: ಬರ ಪರಿಸ್ಥಿತಿಗೆ ತುತ್ತಾಗಿರುವ ರಾಜ್ಯದ ಜಿಲ್ಲೆ, ತಾಲೂಕುಗಳಲ್ಲಿ ರಾಜ್ಯ ಸರಕಾರದ ಬರ ಉಸ್ತುವಾರಿ ವ್ಯವಸ್ಥೆ ವತಿಯಿಂದ ಕೃಷಿ ಭಾಗ್ಯ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಬರಕ್ಕೆ ಬೇಸತ್ತ ರೈತರ ಬ್ಯಾಂಕ್ ಖಾತೆಗಳಿಗೆ ಪರಿಕರ ಸಹಾಯಧನ (ಇನ್‌ಪುಟ್ ಸಬ್ಸಿಡಿ) ವನ್ನು ತಕ್ಷಣವೇ ಸಂದಾಯ ಮಾಡುವ ‘ಪರಿಹಾರ’ ತಂತ್ರಾಶ ಅಳವಡಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನಗರದಲ್ಲಿ ನಡೆದ ‘ಬರ ನಿರ್ವಹಣೆ ಕಾರ್ಯತಂತ್ರ-ಉತೃಷ್ಟ ಪದ್ಧತಿಗಳು’ ವಿಷಯ ಕುರಿತು ಎರುಡು ದಿನ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರ ಎದುರಿಸುತ್ತಿರುವ ರೈತರ ಅನುಕೂಲಕ್ಕಾಗಿ ನೀಡಿದ ಸಿರಿಧಾನ್ಯ ಬೇಸಾಯಕ್ಕೆ ಪ್ರೋತ್ಸಾಹ ಕ್ರಮ, ಕಿರುಜಲಾನಯನ ಅಭಿವೃದ್ಧಿ ಯೋಜನೆ ಸುಜಲ 3 ಕಾರ್ಯಕ್ರಮ ಹಾಗೂ ಬೆಳೆವಿಮೆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ‘ಸಂರಕ್ಷಣೆ’ ತಂತ್ರಾಂಶ ಅಭಿವೃದ್ಧಿಗೊಳಿಸಿ ಅಳವಡಿಸಲಾಗಿದೆ.

ಕಳೆದ 13ವರ್ಷಗಳಲ್ಲಿ ಅನೇಕ ಜಿಲ್ಲೆಗಳು ನೈಸರ್ಗಿಕ ವಿಕೋಪಕ್ಕಿಂತ ಬರ ಪರಿಸ್ಥಿತಿಯೇ ಎದುರಾಗುತ್ತಿದ್ದು, ಇದು ಮಳೆ ಆಧಾರಿತ ದೇಶದ ಕೃಷಿ ಮೇಲೆ ಗಂಭೀರ ಪರಿಣಾಮ ಭೀರಿದೆ. ಇದನ್ನು ನಿಯಂತ್ರಿಸಲು ನೂತನ ಹಾಗೂ ಆವಿಷ್ಕಾರಿ ಕಾರ್ಯತಂತ್ರ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೇ ಬರ ನಿರ್ವಹಣೆಗಾಗಿ ಇನ್ನು ಹಲವು ನೂತನ ಪದ್ಧತಿಗಳ ಅವಶ್ಯಕತೆ ಇದೆ. ಆದ್ದರಿಂದ ವಿವಿಧ ರಾಜ್ಯಗಳು ಬರ ನಿರ್ವಹಣೆಗಾಗಿ ಅಳವಡಿಕೊಂಡಿರುವ ನಿರ್ವಹಣಾ ಪದ್ದತಿಗಳನ್ನು ಪುನರಾವಲೋಕನ ಮಾಡಬೇಕಿದೆ ಎಂದು ತಿಳಿಸಿದರು.

Comments are closed.