
ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ಮಂಡಳಿ (ಸಿಎಟಿ) ತಾತ್ಕಾಲಿಕ ತಡೆ ನೀಡಿದೆ.
ಅವಧಿಗೂ ಮುನ್ನವೇ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿಯವರು ಸಿಎಟಿ ಮೊರೆ ಹೋಗಿದ್ದರು. ಸಿಂಧೂರಿಯವರ ಮನವಿಯನ್ನು ವಿಚಾರಣೆ ನಡೆಸಿದ ಸಿಎಟಿ ವರ್ಗಾವಣೆ ಆದೇಶವನ್ನು ಮಾರ್ಚ್ 13ರವರೆಗೆ ತಡೆ ನೀಡಿದೆ.
ಸಿಎಟಿ ಆದೇಶದ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿಯವರು ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರೆಯಲಿದ್ದು, ರಾಜ್ಯ ಸರಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಈ ಸಂಬಂಧ ಮಾರ್ಚ್ 12ರೊಳಗೆ ಪ್ರಕಿಕ್ರಿಯೆ ನೀಡುವುದಾಗಿ ರಾಜ್ಯ ಸರಕಾರ ಸಿಎಟಿಗೆ ತಿಳಿಸಿದೆ.
Comments are closed.