
ಬೆಂಗಳೂರು: ಶಾಸಕ ಶಿವಮೂರ್ತಿ ನಾಯ್ಕ ಅವರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೈಸೂರಿನಲ್ಲಿ ಹುಡುಕಾಟ ನಡೆಸಿದ್ದು, ಮದುವೆಯಾಗಿರುವ ಅವರು ಪತಿ ಸುಂದರ್ ಗೌಡ ಜತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಮಾಸ್ತಿಗುಡಿ’ ನಿರ್ಮಾಪಕ ಸುಂದರ್ ಗೌಡ ಮತ್ತು ಲಕ್ಷ್ಮೀ ನಾಯ್ಕ ಅವರು ಮದುವೆಯಾಗಿ ಸೆಲ್ಫಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ನಾಪತ್ತೆ ದೂರಿನಲ್ಲಿ ಸುಂದರ್ ಗೌಡನ ಜತೆ ಲಕ್ಷ್ಮೀ ನಾಯ್ಕ ಹೋಗಿದ್ದಾರೆ ಎಂದು ಉಲ್ಲೇಖ ಇಲ್ಲ. ಆದರೆ ಆಕೆ ಸ್ನೆಹಿತರ ಜತೆ ತಾನು ಸುಂದರ್ ಗೌಡನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಮುದುವೆಯಾಗಲು ಹೋಗುತ್ತಿದ್ದೇವೆ ಎಂದೂ ತಿಳಿಸಿದ್ದರು.
ಈ ಜೋಡಿಯನ್ನು ಹುಡುಕು ಮೈಸೂರಿಗೆ ತೆರಳಿರುವ ಯಲಹಂಕ ನ್ಯೂ ಟೌನ್ ಪೊಲೀಸರ ತಂಡ ಮೈಸೂರು ಕಮಿಷನರ್ ಮತ್ತು ಮೈಸೂರು ಎಸ್‌ಪಿ ಅವರಿಗೂ ವಿಚಾರ ರವಾನಿಸಿದ್ದಾರೆ. ನಾಪತ್ತೆಯಾದ ಜೋಡಿ ಈವರೆಗೂ ಪೊಲೀಸರನ್ನು ಮತ್ತು ಕುಟುಂಬದವರನ್ನು ಸಂಪರ್ಕಿಸಿಲ್ಲ.
Comments are closed.