ಕರ್ನಾಟಕ

ಎಪ್ರಿಲ್‌ ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ

Pinterest LinkedIn Tumblr


ಬೆಂಗಳೂರು: ಬಹು ನಿರೀಕ್ಷಿತ ಮತ್ತು ಕುತೂಹಲಕಾರಿ ಎನಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯು ಎಪ್ರಿಲ್‌ ಅಂತ್ಯದಲ್ಲಿ ಅಥವಾ ಮೇ ಆದಿಯಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಬುಧವಾರ ತಿಳಿಸಿದೆ.

ರಾಜ್ಯದಲ್ಲಿ ಚುನಾವಣೆ ನಡೆಸುವ ಸಂಬಂಧವಾಗಿ ಉನ್ನತ ಅಧಿಕಾರಿಗಳೊಂದಿಗೆ ಸಿದ್ಧತೆಗಳ ಕುರಿತಾಗಿ ಮಾತುಕತೆ ನಡೆಸಲು ಕೇಂದ್ರ ಚುನಾವಣಾ ಆಯುಕ್ತರು ಸದ್ಯದಲ್ಲೇ ಇಲ್ಲಿಗೆ ಬರಲಿದ್ದಾರೆ. ಅನಂತರದಲ್ಲಿ ಅವರು ಅಧಿಕೃತವಾಗಿ ಚುನಾವಣಾ ದಿನಾಂಕ ಪ್ರಕಟಿಸಲಿದ್ದಾರೆ.

224 ಸದಸ್ಯ ಬಲದ ಹಾಲಿ ವಿಧಾನಸಭೆಯ ಅಧಿಕಾರಾವಧಿ ಈ ವರ್ಷ ಮೇ 28ರಂದು ಮುಗಿಯಲಿದೆ.

-ಉದಯವಾಣಿ

Comments are closed.