ರಾಷ್ಟ್ರೀಯ

ಗೌತಮ್ ಗಂಭೀರ್‌ಗೆ ಡೆಲ್ಲಿ ಡೇರ್ ಡೆವಿಲ್ಸ್ ಸಾರಥ್ಯ

Pinterest LinkedIn Tumblr


ದೆಹಲಿ: ಕಳೆದ ಋತುವಿನಲ್ಲಿ ಕೆಕೆಆರ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್‌ಗೆ ಪ್ರಸಕ್ತ ಋತುವಿನ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಸಾರಥ್ಯದ ಭಾಗ್ಯ ಒಲಿದು ಬಂದಿದೆ.

ಐಪಿಎಲ್‌ನಲ್ಲಿ ಡೆಲ್ಲಿಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಅವರ ನಾಯಕತ್ವದಲ್ಲಿ ಕೆಕೆ 2012 ಮತ್ತು 14ರಲ್ಲಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಅವರು ಕೆಕೆಆರ್ ತಂಡವನನು 2011ರಲ್ಲಿ ಸೇರಿದ್ದರು. ಜನವರಿಯಲ್ಲಿ ನಡೆದ ಹರಾಜಿನಲ್ಲಿ ಡೆಲ್ಲಿ ತಂಡವು ಅವರನ್ನು 2.8 ಕೋಟಿಗೆ ಖರೀದಿಸಿತ್ತು. ಆರಂಭಿಕ ಮೂರು ಋತುಗಳಲ್ಲಿ ಅವರು ಡೆಲ್ಲಿ ಪರವಾಗಿಯೇ ಆಡಿದ್ದರು.

ಡೆಲ್ಲಿಯ ನಾಯಕತ್ವ ವಹಿಸಿಕೊಳ್ಳಲು ಹಿಂದೆಂದಿಗಿಂತಲೂ ನಾನು ಉತ್ಸುಕನಾಗಿದ್ದೇನೆ. ಇದಕ್ಕೂ ಮೊದಲು ನಾನು ಆರಂಭಿಕ ಮೂರು ಋತುಗಳಲ್ಲಿ ಡೆಲ್ಲಿ ಪರವಾಗಿಯೇ ಆಡಿದ್ದೆ. ಹಾಗಾಗಿ ನನಗೆ ಡೆಲ್ಲಿಯೆಂದರೆ ಹೃದಯ ಯಾವುದೋ ಒಂದು ಮೂಲೆಯಲ್ಲಿ ಮೂರನೇ ಬಾರಿಗೆ ಕೆಕೆಆರ್ ಗೆಲುವಿಗೆ ಪ್ರಯತ್ನಿಸಬೇಕು ಎಂದುಕೊಂಡಿದ್ದೆ. ಆದರೆ ಈಗ ನಾನು ನನ್ನ ತವರಿನ ತಂಡವನ್ನು ಸೇರಿದ್ದು, ಪ್ರಶಸ್ತಿ ಗೆಲುವಿಗಾಗಿ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತೇನೆ ಎಂದು ಗಂಭೀರ್ ಹೇಳಿದರು.

Comments are closed.