ಕರ್ನಾಟಕ

ಬಸ್ಸಿನಲ್ಲಿ ಪ್ರಯಾಣಿಸುವ ಸ್ತ್ರೀಯರಿಗೆ ‘ಕೋರಿಕೆ ನಿಲುಗಡೆ’ ಸೌಲಭ್ಯ

Pinterest LinkedIn Tumblr


ಬೆಂಗಳೂರು: ಇದೇ ತಿಂಗಳ 8ರಂದು ವಿಶ್ವವ್ಯಾಪಿ ಮಹಿಳಾ ದಿನಾಚರಣೆ ದಿನ ಪ್ರಯುಕ್ತ ಸ್ತ್ರೀ ಪ್ರಯಾಣಿಕರಿಗಾಗಿ ‘ಕೋರಿಕೆ ಮೇರೆಗೆ ನಿಲುಗಡೆ’, ‘ಇಂದಿರಾ ಸಾರಿಗೆ’ ಮತ್ತು ಕಟ್ಟಡ ಕಾರ್ಮಿಕರಿಗೆ ‘ಉಚಿತ ಪಾಸ್’ ನೀಡುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕಲ್ಪಿಸಲಿದೆ.

ಮಹಿಳೆಯರಿಗೆ ಸಾರಿಗೆ ಇಲಾಖೆ ಈ ಕೊಡುಗೆ ನೀಡಲಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ. ಬಸ್ ಪ್ರಯಾಣದ ವೇಳೆ ನಿಲ್ದಾಣಕ್ಕೆ ಮುನ್ನವೇ ಒಂಟಿ ಮಹಿಳೆಗೆ ಮನವಿ ಮೇಲೆ ನಿಲುಗಡೆ ನೀಡುವ ಸೌಲಭ್ಯ ಒದಗಿ ಸಲು ‘ಕೋರಿಕೆ ನಿಲುಗಡೆ ವ್ಯವಸ್ಥೆ’ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಸವಲತ್ತಿನಿಂದ ಮಹಿಳೆಯರು ಮನೆ ಅಥವಾ ಕಚೇರಿ ತಲುಪಲು ಅನುಕೂಲ ವಾಗುವುದು. ಜತೆಗೆ, ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಹಾಕಿದಂತಾಗುತ್ತದೆ ಎಂದರು.

ಬಿಎಂಟಿಸಿ ಬಸ್ ಗಳಲ್ಲಿ 2.5 ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಇಂದಿರಾ ಸಾರಿಗೆ 13 ರಂದು ಜಾರಿಗೆ ಬರಲಿದೆ. 2 ಲಕ್ಷ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೂ ಈ ಸೌಲಭ್ಯ ಕಲ್ಪಿಸಲಾಗುತ್ತದೆ. ಮಹಿಳೆಯರಿಗೆ ಒದಗಿಸಿರುವ ಪಿಂಕ್ ಸೀಟ್ ವ್ಯವಸ್ಥೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Comments are closed.