ಕರ್ನಾಟಕ

‘ಕೈ’ನಲ್ಲಿ ಯುವ ನಾಯಕತ್ವಕ್ಕೆ ಮಣೆ, ಹಿರಿಯರಿಗೆ ಕೊಕ್?

Pinterest LinkedIn Tumblr


ಬೆಂಗಳೂರು: ಯುವ ನಾಯಕತ್ವಕ್ಕೆ ಮಣೆ ಹಾಕುವ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಹಿರಿಯ ನಾಯಕರಿಗೆ ಕೊಕ್ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಪಟ್ಟ ಕಟ್ಟಿದ ನಂತರ ಪಕ್ಷದಲ್ಲಿ ಯುವ ಅಲೆಯ ಜಪ ಆರಂಭವಾಗಿ, ಯಶಸ್ವಿಯೂ ಆಗಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭವನ್ನೇ ಸೂಕ್ತವೆಂದು ನಿರ್ಧರಿಸಿರುವ ಪಕ್ಷದ ಹೈಕಮಾಂಡ್ ಕರ್ನಾಟಕ ದಲ್ಲೂ ಯುವ ಅಲೆ ಎಬ್ಬಿಸಲು ಮುಂದಾಗಿದೆ. ಚುನಾವಣೆ ದಿನಾಂಕ ಘೋಷಣೆ ಹತ್ತಿರ ವಾಗುತ್ತಿರುವ ಸಂದರ್ಭ ಇಂಥ ಮಹತ್ವದ ನಿರ್ಧಾರಕ್ಕೆ ಮುಂದಾಗಿರುವ ರಾಷ್ಟ್ರೀಯ ಹಾಗೂ ರಾಜ್ಯದ ಹಿರಿಯ ನಾಯಕರು ಪಕ್ಷದ ಚಟುವಟಿಕೆಯಿಂದ ದೂರ ವಿದ್ದಾರೆ.

ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಯುವ ಸಮುದಾಯದ ಕೈ ಬಲಪಡಿಸಬೇಕೆಂಬ ನಿಲು ವಿಗೆ ಪಕ್ಷ ಬಂದಿದೆ. ಒಂದೆಡೆ ಈಶಾನ್ಯ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಆದ ಹಿನ್ನಡೆ, ಬಿಜೆಪಿ ಕರ್ನಾಟಕದ ಬಗ್ಗೆ ತಾಳಿರುವ ಆಸಕ್ತಿ ಗಮನಿಸಿ ನಿರ್ಧಾರಕ್ಕೆ ಬರಲಾಗಿದೆ.

ರಾಜ್ಯದಲ್ಲಿ ಹಳೆ ತಲೆಗೆ ಕೊಕ್ ನೀಡಿ, ಎನ್‌ಎಸ್‌ಯುಐನ ಹೊಸ ನಾಯಕರಿಗೆ ಅಧಿಕಾರ ನೀಡುವ ಹೊಸ ತಂತ್ರಗಾರಿಕೆ ರೂಪಿಸ ಲಾಗುತ್ತಿದೆ. 12ಕ್ಕೂ ಹೆಚ್ಚು ಮಂದಿಯ ಜತೆ ಮಾತುಕತೆ ನಡೆದಿದ್ದು, ಕನಿಷ್ಠ 3 ರಿಂದ 5 ಮಂದಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಬಂದಿದೆ. ಪಕ್ಷದ ಪ್ರಮುಖ ಹಾಗೂ ಹಿರಿಯ ಕೆಲ ನಾಯಕರು 2023ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಲು ಘಟಾನುಘಟಿ ನಾಯಕರಿದ್ದಾರೆ. ಆದರೆ ಮುಂದಿನ ಚುನಾವಣೆಗೆ ಕೊರತೆಯಾಗಲಿದೆ.

2023ರ ಹೊತ್ತಿಗೆ ಸಿ.ಕೆ.ಜಾಫರ್ ಷರೀಫ್, ಜನಾರ್ದನ ಪೂಜಾರಿ, ಸಿಎಂ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಶಾಮನೂರು ಶಿವ ಶಂಕರಪ್ಪ, ಕಾಗೋಡು ತಿಮ್ಮಪ್ಪ ರಾಜ್ಯ ಕಾಂಗ್ರೆಸ್ ಸಕ್ರಿಯ ರಾಜಕಾರಣದಿಂದ ವಿಶ್ರಾಂತಿಗೆ ತೆರಳಲಿದ್ದಾರೆ. ಇದರಿಂದಾಗಿ ಯುವ ನಾಯಕರಿಗೆ ಮಣೆ ಹಾಕಿ ಹೊಸ ನಾಯಕತ್ವ ಹುಟ್ಟು ಹಾಕಲು ಪಕ್ಷದ ಹೈಕಮಾಂಡ್ ಮುಂದಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Comments are closed.