ಕರ್ನಾಟಕ

ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ ಕರ್ನಾಟಕ ಎನ್ ಆರ್ ಐ ಫೋರಮ್; ಎನ್ ಅರ್ ಕೆ ಐಡೆಂಟಿ ಕಾರ್ಡಿಗಾಗಿ ರಿಜಿಸ್ಟರ್ ಮಾಡಿ

Pinterest LinkedIn Tumblr

ತಮ್ಮ ಕುಟುಂಬವನ್ನು ಸಾಕಿ ಸಲಹುವ ಉದ್ದೇಶದಿಂದ ಊರು ಮನೆ ಕುಟುಂಬವನ್ನು ಬಿಟ್ಟು ಯು ಎ ಇ ಯಲ್ಲಿ ಜೀವಿಸುತ್ತಿರುವ ಅನಿವಾಸಿ ಕನ್ನಡಿಗರ ಏಳಿಗೆಗಾಗಿ ತಲೆ ಎತ್ತಿರುವ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ(ಎನ್ ಆರ್ ಐ ಫೋರಮ್)’ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಎನ್ ಆರ್ ಐ ಫೋರಮ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರ ನಿಯೋಗವೊಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನ ಅವರ ಕಛೇರಿಯಲ್ಲಿ ಭೇಟಿಯಾದರು.

ಅನಿವಾಸಿ ಕನ್ನಡಿಗರ ಹಲವು ಸಮಸ್ಯೆಗಳನ್ನು ವಿವರಿಸಿದರು, ಗಲ್ಫ್ ದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ಮರಳುವ ಅನಿವಾಸಿಗರಿಗೆ ಸರ್ಕಾರವು ಹೆಚ್ಚಿನ ಸಹಾಯವನ್ನು ನೀಡಬೇಕೆಂದು ಕೋರಿಕೊಂಡು ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಿವಾಸಿಗಳಿಗಾಗಿ ಎಲ್ಲಾ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಭೇಟಿಯ ನಿಯೋಗದಲ್ಲಿ ಕರ್ನಾಟಕ ಎನ್ ಆರ್ ಐ ಫೋರಮ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಮಿತಿ ಸದಸ್ಯರಾದ ಸದನ್ ದಾಸ್ , ದೀಪಕ್ ಸೋಮಶೇಖರ್, ನಾಸಿರ್ ಕರಾಜೆ, ಜೇಮ್ಸ್ ಮೆಂಡೋನ್ಸಾ, ಜೋಸೆಫ್ ಮಾತಾಯಿಸ್, ಸಲೀಂ ಅಲ್ತಾಫ್ ಹಾಜರಿದ್ದರು.

ಈ ಕೆಳಕಂಡ ವೆಬ್ ಲಿಂಕನ್ನು ಉಪಯೋಗಿಸಿ ಎನ್ ಅರ್ ಕೆ ಐಡೆಂಟಿ ಕಾರ್ಡನ್ನು ಅನಿವಾಸಿಗಳು ರಿಜಿಸ್ಟರ್ ಮಾಡಿ ಉಚಿತ ವಿಮೆ ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆಯಲು ಸಮಿತಿ ತಂಡ ಈ ಮೂಲಕ ಸೂಚಿಸಿದ್ದಾರೆ .

Kindly register online on nriforum.karnataka.gov.in to get NRK card through which NRKs can avail a host of benefits ranging from free insurance to various health packages.

Direct link for registration: http://117.239.137.35/nriregister/Pages/memberrequest.aspx

After registration, login with username and password to fill the form: http://117.239.137.35/_layouts/15/Sp.Login.Custom/Login.aspx

For more information visit http://nriforum.karnataka.gov.in/Pages/Home.aspx

Comments are closed.