ಕರ್ನಾಟಕ

ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ: ಸಿದ್ದರಾಮಯ್ಯ

Pinterest LinkedIn Tumblr


ಹುಬ್ಬಳ್ಳಿ: ಈಶಾನ್ಯ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶ ನಮ್ಮ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಯಾವುದೇ ರಾಜ್ಯದ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಪರಿಣಾಮ ಆಗಲ್ಲ. ಫಲಿತಾಂಶದಿಂದ ಆಶ್ಚರ್ಯವೇನಿಲ್ಲ, ಜನರು ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು. ನಾವು ತ್ರಿಪುರ, ನಾಗಾಲ್ಯಾಂಡ್ ಗೆಲ್ಲುವ ಭ್ರಮೆಯಲ್ಲಿ ಇರಲಿಲ್ಲ ಎಂದು ಸೇರಿಸಿದರು.

ಬ್ಯಾಲೆಟ್ ಪೇಪರ್‌ನಲ್ಲಿ ರಾಜ್ಯದ ಚುನಾವಣೆ ನಡೆಸಬೇಕು ಎನ್ನುವ ಅಭಿಪ್ರಾಯವಿದೆ. ಫೇರ್ ಎಲೆಕ್ಷನ್‌ ಆಗಬೇಕು. ಅನೇಕ ದೇಶಗಳು ಇವಿಎಮ್‌ಗೆ ಹೋಗಿ ಬ್ಯಾಲೆಟ್ ಪೇಪರ್‌ಗೆ ವಾಪಸಾಗಿವೆ ಎಂದು ಹೇಳಿದರು.

ರಾಜ್ಯ ಬಿಜೆಪಿಯಿಂದ ಮುಕ್ತ…

ರಾಜ್ಯದಲ್ಲಿ ಬಿಜೆಪಿಯವರೇ ಮುಕ್ತರಾಗುತ್ತಾರೆ. ವಿಧಾನಸಭೆ ಚುನಾವಣೆ ಮುಂದೂಡಲು ಆಗಲ್ಲ. ಚುನಾವಣೆ ಮುಂದೂಡಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು ಎಂದರು.

ಲಿಂಗಾಯತ ಸ್ವತಂತ್ರ ಧರ್ಮ ವಿಚಾರ…
ನಾಗಮೋಗನ್ ದಾಸ್ ಅಲ್ಪಸಂಖ್ಯಾತ ಆಯೋಗಕ್ಕೆ ವರದಿ ಕೊಟ್ಟಿದ್ದಾರೆ. ವರದಿ ಸರ್ಕಾರದ ಮುಂದೆ ಬಂದಿಲ್ಲ, ಬಂದ ಮೇಲೆ ನೋಡ್ತೇವೆ. ಬೇಗ ವರದಿ ಕೊಡುವಂತೆ ಸರ್ಕಾರದ ಒತ್ತಡವಿರಲಿಲ್ಲ ಎಂದರು.

Comments are closed.