ತ್ರಿಪುರಾ ಮುಖ್ಯಮಂತ್ರಿಯಾಗಲು ಸಿದ್ಧ; ಆದರೆ ಪಕ್ಷದ ತೀರ್ಮಾನವೇ ಅಂತಿಮ: ಬಿಪ್ಲಬ್ ದೇವ್, ತ್ರಿಪುರಾ ಬಿಜೆಪಿ ಅಧ್ಯಕ್ಷ
ನಾವು ‘ಚಲೋ ಪಾಲ್ತಾಯ್’ ಘೋಷಣೆ ನೀಡಿದ್ದೆವು. ತ್ರಿಪುರಾದ ಜನತೆ ಪರಿವರ್ತನೆಗೆ ಜನಾದೇಶ ನೀಡಿದ್ದಾರೆ: ಅಮಿತ್ ಶಾ
ಈ ಮೊದಲು ಬಿಜೆಪಿ ಹಿಂದಿ ಭಾಷಿಕ ರಾಜ್ಯಗಳಿಗೆ ಮಾತ್ರ ಸೀಮಿತವೆಂದು ನಂಬಲಾಗಿತ್ತು. ಇಂದಿನ ಫಲಿತಾಂಶ ಆ ಗ್ರಹಿಕೆ ಸರಿಯಲ್ಲ ಎಂಬುದನ್ನು ಸಾಬೀತುಪಡಿಸಿದೆ: ಅಮಿತ್ ಶಾ.
ತ್ರಿಪುರಾದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಸಚಿವ ಸಂಪುಟದಲ್ಲಿ ಮೈತ್ರಿ ಪಕ್ಷದ ಸದಸ್ಯರನ್ನೂ ಸೇರಿಸಿಕೊಳ್ಳುತ್ತೇವೆ: ಬಿಜೆಪಿ ಅಧ್ಯಕ್ಷ ಅಮಿತ್ ಶಾ.
ಬಿಜೆಪಿಗೆ ಬಲವಾದ ಬೆಂಬಲ ನೀಡಿದ ತ್ರಿಪುರಾದ ಸೋದರ-ಸೋದರಿಯರಿಗೆ ಧನ್ಯವಾದ ಸಮರ್ಪಿಸುವೆ. ಮೋದಿ ಅವರ ಅಭಿವೃದ್ಧಿ ರಾಜಕೀಯಕ್ಕೆ ಹಾಗೂ ಈಶಾನ್ಯ ಭಾರತದ ಅಭಿವೃದ್ಧಿಗೆ ಅವರು ತೋರಿದ ಬದ್ಧತೆಗೆ ಸಂದ ಗೆಲುವಿದು: ಅಮಿತ್ ಶಾ.
………………
ಬಿಜೆಪಿಗೆ ಐತಿಹಾಸಿಕ ಗೆಲುವು ದೊರಕಿಸಿ ಕೊಟ್ಟಿದ್ದಕ್ಕಾಗಿ ತ್ರಿಪುರಾದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು. ತ್ರಿಪುರಾದ ಜನತೆ ಎಡಪಕ್ಷದ ತಾರತಮ್ಯ ಹಾಗೂ ದಮನಕಾರಿ ಆಡಳಿತದ ವಿರುದ್ಧ ಬಿಜೆಪಿಯ ಅಭಿವೃದ್ಧಿ ನೀತಿಯನ್ನು ಬೆಂಬಲಿಸಿದ್ದಾರೆ: ಅರುಣ್ ಜೇಟ್ಲಿ, ಕೇಂದ್ರ ವಿತ್ತಸಚಿವರು.
…………….
ಪ್ರತಿ ಕಾರ್ಯಕರ್ತನಿಗೂ ತಲೆಬಾಗಿ ವಂದಿಸುವೆ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್.
ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಜನತೆಗೆ ಪ್ರಧಾನಿ ಮೋದಿ ಧನ್ಯವಾದ.
………..
ತ್ರಿಪುರಾದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು ಅವಿಸ್ಮರಣೀಯ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಪೂರ್ತಿದಾಯಕ ನಾಯಕತ್ವ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಕಾರ್ಯತಂತ್ರಗಳ ಫಲವಿದು: ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವರು.