ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಮಹಮದ್ ನಲಪಾಡ್ ಹ್ಯಾರಿಸ್ ಜೈಲಿನಲ್ಲಿ ಇರಲಾರದೆ ಪರದಾಡುತ್ತಿದ್ದು ತಂದೆ ಹ್ಯಾರಿಸ್ಗೆ ಕರೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಜೈಲಿನಿಂದ ಫೋನ್ ಕರೆ ಮಾಡಿ ಶಾಸಕ ಹ್ಯಾರಿಸ್ ವಿರುದ್ಧವೇ ಕಿಡಿ ಕಾರಿದ್ದಾರೆ ಎನ್ನಲಾಗಿದ್ದು, ಉರ್ದುವಿನಲ್ಲಿ ಮಾತನಾಡುತ್ತಾ, ನೀನು ಬಂದು ಜಾಮೀನು ಕೊಡುತ್ತೀಯಾ ? ಇಲ್ಲದಿದ್ದರೆ ನನ್ನ ಹುಡುಗರು ಇದ್ದಾರೆ ಅವರು ಜಾಮೀನು ಕೊಡುತ್ತಾರೆ. ನೀನು ಜೈಲಿಗೂ ಬಂದಿಲ್ಲ , ನಾನು ಹೊರ ಬಂದ ಮೇಲೆ ನಿನಗೆ ಇದೆ ಎಂದು ಆವಾಜ್ ಹಾಕಿರುವುದಾಗಿ ವರದಿಯಾಗಿದೆ.
ಇಂದು ಶುಕ್ರವಾರ ನಲಪಾಡ್ 10 ದಿನಗಳ ಜೈಲು ವಾಸ ಅಂತ್ಯವಾಗುತ್ತದಾ ಎನ್ನುವುದು ತೀರ್ಮಾನವಾಗಲಿದ್ದು, 64 ನೇ ಸಿಸಿಎಚ್ ನ್ಯಾಯಾಲಯ ಮಧ್ಯಾಹ್ನ ಜಾಮೀನು ಅರ್ಜಿ ಕುರಿತಾಗಿ ತೀರ್ಪು ನೀಡಲಿದೆ.
-ಉದಯವಾಣಿ