ಕರ್ನಾಟಕ

ಇಂದಿರಾ ಕ್ಯಾಂಟೀನ್‌ನಲ್ಲಿನ್ನು ದರ್ಶಿನಿ ರೀತಿಯ ಮೆನು: ಮತದಾರರನ್ನು ಸೆಳೆಯಲು ಆಡಳಿತಾರೂಢ ಸರಕಾರದ ಹೆಜ್ಜೆ

Pinterest LinkedIn Tumblr


ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿಯ ಮತದಾರರನ್ನು ಸೆಳೆಯಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹೊಸ ತಂತ್ರಕ್ಕೆ ಮೊರೆ ಹೋಗಿದೆ.

ಇದೇ ಮಾರ್ಚ್ 1 ರಿಂದ ಇಂದಿರಾ ಕ್ಯಾಂಟಿನ್ ಮೆನುವಿನಲ್ಲಿ ಬದಲಾವಣೆಯಾಗಲಿದೆ. ವೈವಿಧ್ಯಮಯ ಊಟ, ಉಪಹಾರ ನೀಡಲು ಸರ್ಕಾರ ಮುಂದಾಗಿದೆ. ಅನ್ನ ಸಾಂಬಾರ್ ಮೊಸರನ್ನಗಳಿಗೆ ಸೀಮಿತವಾಗಿದ್ದ ಕ್ಯಾಂಟೀನ್’ನಲ್ಲಿ ಇನ್ನು ಮುಂದೆ ಉಪಹಾರ ದರ್ಶಿನಿಗಳಂತೆ ಉತ್ತರ ಭಾರತದ ತಿನಿಸುಗಳನ್ನೂ ನೀಡಲಾಗುವುದು.

ಖಾದ್ಯಗಳ ಬಗೆಯನ್ನು ಹೆಚ್ಚಳ ಮಾಡಿರುವ ಕಾರಣ ಸಾರ್ವಜನಿಕ ಬೊಕ್ಕಸಕ್ಕೆ ಹೊರೆ ಹೆಚ್ಚಾಗಲಿದ್ದು ತೆರಿಗೆದಾರರ ಮೇಲೆ ಇನ್ನಷ್ಟು ಹೊರೆ ಹೇರಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು ಸಾಲದ ಸುಳಿಯಲ್ಲಿರುವ ಪಾಲಿಕೆ ಕ್ಯಾಂಟಿನ್’​ಗಾಗಿ ಮತ್ತಷ್ಟು ಸಾಲ ಮಾಡುವ ಸಾಧ್ಯತೆ ಎಂಬ ಟೀಕೆಗಳು ಕೆಲ ವಲಯಗಳಲ್ಲಿ ಕೇಳಿ ಬರುತ್ತಿದೆ.

Comments are closed.