ಕರ್ನಾಟಕ

ಬಹಮನಿ ಉತ್ಸವ ಆಚರಣೆ ರದ್ದು: ಸಚಿವ ಪಾಟೀಲ್

Pinterest LinkedIn Tumblr


ಕಲಬುರಗಿ: ವಿವಾದಕ್ಕೆ ಕಾರಣವಾದ ಬಹಮನಿ ಉತ್ಸವದ ಆಚರಣೆಯನ್ನು ಸರಕಾರದಿಂದ ಕೈಬಿಡಲಾಗಿದೆ. ಖಾಸಗಿ ಸಂಘ ಸಂಸ್ಥೆಗಳು ಆಚರಣೆಗೆ ಮುಂದೆ ಬಂದರೆ ಪರಿಶೀಲನೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹೆಳಿ ದ್ದಾರೆ.

ಮಾ.6ರಂದು ಕಲಬುರಗಿ ಬಹಮನಿ ಉತ್ಸವ ಆಚರಣೆ ಮಾಡುವುದಾಗಿ ಸಚಿವ ಪಾಟೀಲ್ ಹೇಳಿದ್ದರು. ಆದರೆ ಬಹಮನಿ ಸುಲ್ತಾನರ ಇತಿಹಾಸ ಸಾರುವ ಉತ್ಸವ ಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆ ಗಳು ಉತ್ಸವ ಆಚರಣೆಗೆ ಬಿಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿ, ಮುಸ್ಲಿಂ ಓಲೈಕೆಗಾಗಿ ಜಾತಿ ರಾಜಕಾರಣ ಎಂದು ಕಿಡಿಕಾರಿದ್ದರು.

ಆದರೆ ಸಚಿವ ಪಾಟೀಲ್ ಅವರಿಗೆ ಸ್ವಪಕ್ಷದಲ್ಲೇ ಬೆಂಬಲ ಸಿಗದ ಕಾರಣ, ಉತ್ಸವ ಆಚರಣೆ ಕೈಬಿಡಲಾಗಿದೆ. ಇದರ ಬೆನ್ನಲ್ಲೇ ನಗರ ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕನ್ನಡಪರ ಸಂಘಟನೆಯೊಂದರ ಮುಖಂಡರು ಖಾಸಗಿಯಾಗಿ ಆಚರಣೆಗೂ ಆಸ್ಪದ ನೀಡುವು ದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Comments are closed.