ಕರ್ನಾಟಕ

ಪ್ರೇಮಿಗಳ‌ ದಿನದಂದೇ ಎದೆಗೆ ಚಾಕು ಚುಚ್ಚಿಕೊಂಡ ಪ್ರೇಮಿ!

Pinterest LinkedIn Tumblr


ಬಳ್ಳಾರಿ: ಪ್ರೇಮಿಗಳ ದಿನದಂದು ಪ್ರಿಯತಮನೊಬ್ಬ ಪ್ರಿಯತಮೆಗಾಗಿ ಎದೆಗೆ ಚೂರಿ ಚುಚ್ಚಿಕೊಂಡಿದ್ದಾನೆ.

ಎಷ್ಟು ಕರೆದರೂ ಪ್ರಿಯತಮೆ ಬಾರದಿದ್ದರಿಂದ ಮನ ನೊಂದ ಪ್ರೇಮಿ ಚಾಕುವಿನಿಂದ ಎದೆಗೆ ಚುಚ್ಚಿಕೊಂಡಿದ್ದಾನೆ.

ಹಗರಿಬೊಮ್ಮನಹಳ್ಳಿಯ ಬಳ್ಳಾರಿ ರಸ್ತೆಯ ವೀರೇಶ್‌ (25) ಗಾಯಗೊಗೊಂಡಿರುವ ಪ್ರೇಮಿ.

ಜಿಮ್‌ನಲ್ಲಿ ಟ್ರೇನರ್‌ ಆಗಿದ್ದಾಗ ಯುವತಿಯ ಜತೆ ಪ್ರೇಮಾಂಕುರವಾಗಿತ್ತು. ಆದರೆ ಇದಕ್ಕೆ ಹುಡುಗಿಯ ಮನೆಯವರ ವಿರೋಧವಿತ್ತು.

ಪ್ರೇಮಿಗಳ ದಿನ ಬರಬೇಕೆಂದು ವೀರೇಶ್‌ ಕೇಳಿದ್ದ. ಆದರೆ ಆಕೆ ಮನೆಯವರ ಒತ್ತಡದಿಂದಾಗಿ ಬಾರದಿದ್ದಾಗ ಮನನೊಂದು ವೀರೇಶ್‌ ಎದೆಗೆ ಚಾಕು ಚುಚ್ಚಿಕೊಂಡಿದ್ದಾರೆ.

ನಗರದ ಸರಕಾರಿ ಆಸ್ಪತ್ರೆಯಲ್ಲಿ ಈತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.