ಕರ್ನಾಟಕ

ಪೊಲೀಸ್‌ ಮೇಲೆ ದಾಳಿ; ಮೂವರ ಮೇಲೆ ಫೈರಿಂಗ್‌; ಗ್ಯಾಂಗ್‌ ವಶಕ್ಕೆ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು ಯಲಹಂಕದ ಕೆಂಪನ ಹಳ್ಳಿ ಬಳಿ ವೀರಸಾಗರ ಎಂಬಲ್ಲಿ ಕಾರ್ಯಾಚರಣೆಗಿಳಿದ ದಾಳಿ ನಡೆಸಿದ ಖತರ್ನಾಕ್‌ ಕಳ್ಳರ ಗ್ಯಾಂಗ್‌ನ ಮೂವರು ದುಷ್ಕರ್ಮಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ನಸುಕಿನ ವೇಳೆ ನಡೆದಿದೆ.

ಮಧ್ಯಪ್ರದೇಶ ಮೂಲದ ಕಳ್ಳರ ಗ್ಯಾಂಗ್‌ನ ಸದಸ್ಯರು ಜನವರಿ 18 ರಂದು ಪೊಲೀಸ್‌ ಪೇದೆ ಮೇಲೆ ದಾಳಿ ನಡೆಸಿ ಬಂದೂಕು ಕಸಿದು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರಣ್ಯ ಪುರ ಠಾಣಾ ಪೊಲೀಸರು ಕಾರ್ಯಾಚರಣೆಗಿಳಿದ ವೇಳೆ ಮಾರಕಾಯುಧಗಳಿಂದ ದಾಳಿಗೆ ಮುಂದಾಗಿದ್ದು ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳನ್ನು ಮಟ್ಟ ಹಾಕಿದ್ದಾರೆ.

ಇತ್ತೀಚೆಗೆ ಗ್ಯಾಂಗ್‌ನ ಮುಖಂಡ ರಾಮ್‌ಸಿಂಗ್‌ನನ್ನು ಬಂಧಿಸಿ ಪೊಲೀಸರು ತನಿಖೆ ವೇಳೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು.

ವಿದ್ಯಾರಣ್ಯಪುರ ಇನ್ಸ್‌ಪೆಕ್ಟರ್‌ ರಾಮಮೂರ್ತಿ ಮತ್ತು ಪಿಎಸ್‌ಐ ಅಣ್ಣಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುಂಡಿನ ದಾಳಿಯಿಂದ ಗಾಯಗೊಂಡಿರುವ ಮೂವರ ಸಹಿತ ಐವರನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಧ್ಯಪ್ರದೇಶದ ಧಾರಾ ಜಿಲ್ಲೆಯ ಬಗೋಲಿ ಮೂಲದ ಈ ಖತರ್ನಾಕ್‌ ಗ್ಯಾಂಗ್‌ ರೈಲ್ವೇ ಹಳಿಯಲ್ಲೇ ಸಂಚರಿಸಿ ಸಮೀಪದ ಮನೆಗಳನ್ನು ಟಾರ್ಗೆಟ್‌ ಮಾಡಿ ದರೋಡೆ ನಡೆಸುವುದರಲ್ಲಿ ಕುಖ್ಯಾತಿ ಪಡೆದಿತ್ತು.

-ಉದಯವಾಣಿ

Comments are closed.