ಕರ್ನಾಟಕ

ಕಾಂಗ್ರೆಸ್‌ನ ಪಂಚ ಮುಗ್ಧರಿಗೆ ಡಿವಿಎಸ್‌ ಪಂಚ ಪ್ರಶ್ನೆಗಳು!

Pinterest LinkedIn Tumblr


ಬೆಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ಬಳಿಕ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಆಕ್ರೋಶ ಹೊರ ಹಾಕಿದ್ದು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟ್ವೀಟರ್‌ನಲ್ಲಿ ಪ್ರಶ್ನೆಗಳ ಸುರಿಮಳೆಗೈದು ಕಾಂಗ್ರೆಸ್‌ ನಾಯಕರನ್ನು ಪಂಚ ಮುಗ್ಧರು ಎಂದು ಜರಿದು 5 ಪ್ರಶ್ನೆಗಳನ್ನು ಕೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸಚಿವ ಕೆ.ಜೆ .ಜಾರ್ಜ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡುರಾವ್‌ ಅವರನ್ನು ಟ್ಯಾಗ್‌ ಮಾಡಿ 5 ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರಶ್ನೆಗಳು ಇಂತಿವೆ.

1.ಪಂಚ ಮುಗ್ಧರೇ ದಲಿತ ಯುವಕ ಸಂತೋಷನ ಕೊಲೆ ನಿಮ್ಮ ಮುಗ್ಧ ಸುತ್ತೋಲೆಯ ಪರಿಣಾಮ ಎಂದು ಒಪ್ಪಿಕೊಳ್ಳುತೀರಾ ?

2.ನಿಮ್ಮ ಮುಗ್ಧ ಸುತ್ತೋಲೆ ಹೊರಡಿಸುವ ಮುನ್ನ ಸಮಾಜ ದ್ರೋಹಿ ಶಕ್ತಿಗಳಿಗೆ ನೀವು ರಕ್ಷಾ ಕವಚ ಹಾಕುತ್ತಿದೀರೆಂಬ ಕನಿಷ್ಠ ಜ್ಞಾನವು ನಿಮಗೆ ಇರಲಿಲ್ಲವಾ ?

3.ದಲಿತ ಯುವಕ ಸಂತೋಷನ ಹೆತ್ತವರಿಗೆ ಏನೆಂದು ಹೇಳುತ್ತೀರಿ ಅವರನ್ನು ಮುಗ್ಧರು ಕೊಂದದೆಂದು ಹೇಳುತ್ತೀರಾ ?

4.ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ . ಕಾನೂನು ವ್ಯವಸ್ಥೆ ಅನ್ನುವುದು ಮರೀಚಿಕೆಯಾಗಿದೆ ನೀವು ಇದೆಲ್ಲವನ್ನು ನೋಡಿಯೂ ನೋಡದಂತೆ ಮುಗ್ಧರಾಗಿ ಉಳಿದಿರುವುದರ ಹಿಂದಿನ ಜಾಣ ಮುಗ್ಧತೆ ಏನು ?

5.ನಿಮ್ಮ ಮುಗ್ಧ ತುಷ್ಟಿಕರಣಕ್ಕೆ ಕೊನೆ ಯಾವಾಗ ? ನಿಮ್ಮಗಳ ಆಡಳಿತದಲ್ಲಿ ಹಿಂದೂ ಬಾಂಧವರ ರಕ್ತ ಬಸಿಯುವ ದಾಹಕ್ಕೆ ಕೊನೆ ಯಾವಾಗ? ಒಂದಂತೂ ನೆನಪಿಟ್ಟುಕ್ಕೊಳ್ಳಿ ನೀವೀಗ ಉತ್ತರ ಕೊಡದಿದ್ದರೆ . ಚುನಾವಣೆಯಲ್ಲಿ ರಾಜ್ಯದ ಜನತೆ ಕೊಟ್ಟೇ ಕೊಡುತ್ತಾರೆ.

ಶಾಪ ನಿಮಗೆ ತಟ್ಟುವುದಿಲ್ಲವೆ: ರೆಡ್ಡಿ ತಿರುಗೇಟು !

ಕೇಂದ್ರ ಸಚಿವರಾದ ಸದಾನಂದ ಗೌಡರು ಚುನಾವಣೆಗಾಗಿ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ. ಹಿಂದು‌ಕಾರ್ಯಕರ್ತರ ಕೊಲೆ ಎಂದು ಚುನಾವಣೆಗಾಗಿ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿರುವುದು ಹಾಸ್ಯಾಸ್ಪದ ಎನಿಸಿದೆ. ವಿಜಯಪುರದ ದಾನಮ್ಮಳನ್ನು ಕೊಲೆ ಮಾಡಿರುವುದು ನಿಮ್ಮ ಪಕ್ಷದ ಕಾರ್ಯಕರ್ತನಲ್ಲವೆ? ಮೂಡಿಗೆರೆಯ ಧನ್ಯಶ್ರಿ ಸಾವಿಗೆ ಕಾರಣವಾಗಿರುವುದು ನಿಮ್ಮ ಪಕ್ಷದ ಮುಖಂಡನಲ್ಲವೆ? ಉಡುಪಿಯ ಪ್ರವೀಣ್‌ ಪೂಜಾರಿ ಕೊಲೆ ? ಬಂಟ್ವಾಳದ ಹರೀಶ್‌ ಪೂಜಾರಿ ಕೊಲೆ ? ವಿನಾಯಕರ ಬಾಳಿಗಾ ಅವರ ಕೊಲೆ’ ಪ್ರಕರಣ ಗಳನ್ನು ಉಲ್ಲೇಖ ಮಾಡಿ ‘ಇವರೆಲ್ಲರ ತಾಯಂದಿರ ಶಾಪ ನಿಮಗೆ ತಟ್ಟುವುದಿಲ್ಲವೆ’ ಎಂದು ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

-ಉದಯವಾಣಿ

Comments are closed.