ಕರ್ನಾಟಕ

ಒಂದೇ ಜಾಗದಲ್ಲಿ 9 ಅಪಘಾತ: ಹೋಮದ ಮೊರೆ ಹೋದ ಗ್ರಾಮಸ್ಥರು

Pinterest LinkedIn Tumblr


ಮಧುಗಿರಿ: ಪಾವಗಡ-ಮಳವಳ್ಳಿ ನಡುವಿನ ಕೆ-ಶಿಪ್ ರಸ್ತೆಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಇದರ ನಿಯಂತ್ರಣವಾಗಲೆಂದು ಸುತ್ತಮುತ್ತಲಿನ ಗ್ರಾಮಸ್ಥರು ದಾರ್ಮಿಕ ಕಾರ್ಯಕ್ರಮಕ್ಕೆ ಮೊರೆ ಹೋಗಿದ್ದಾರೆ.

ಹೊಸಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗಿರಿಯಮ್ಮನ ಪಾಳ್ಯ, ಪಡಸಾಲಹಟ್ಟಿ, ಹೊಸಕೆರೆ ಕೆರೆಯ ಭಾಗದವರೆವಿಗೊ ಯಾವುದೇ ಅಪಘಾತಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೂ ವೇದ ಬ್ರಹ್ಮ ನಾಗರಾಜಶಾಸ್ತ್ರಿಗಳ ನೇತೃತ್ವದಲ್ಲಿ 6 ನಾನಾ ಹೋಮ, ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು.

ರಸ್ತೆಯಲ್ಲಿ ಕಳೆಡೆರಡು ತಿಂಗಳುಗಳಿಂದ ಒಂಬತ್ತಕ್ಜೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಬಹುತೇಕ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿರುವುದರಿಂದ ಗ್ರಾಮಸ್ಥರು ಬೇರೇ ಮಾರ್ಗ ಕಾಣದೇ ದೇವರ ಮೂರೆ ಹೋಗಿರುವುದಾಗಿ ಗ್ರಾ.ಪಂ.ಸದಸ್ಯ ಮಿಲ್ಟ್ರಿ ಚಿಕ್ಕಣ್ಣ ಹೇಳಿದರು.

ಈ ಹೋಮ ಕಾರ್ಯಕ್ರಮವನ್ನು ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಗ್ರಾಮದಿಂದ ಪಡಸಾಲಹಟ್ಟಿ ಬಸ್‌ ತಂಗುದಾಣ, ಹೊಸಕೆರೆ ಸಮೀಪ, ಗಿರಿಯಮ್ಮನ ಪಾಳ್ಯದ ಮೂರು ಕಡೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮಸ್ಥರಿಂದ ಚಂದಾರೂಪದಲ್ಲಿ ಹಣ ಸಂಗ್ರಹಿಸಿ ಈ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Comments are closed.