ಕರ್ನಾಟಕ

ಸಂಗೀತ ಮಾಂತ್ರಿಕ ಇಳಯರಾಜಾಗೆ ಪದ್ಮ ವಿಭೂಷಣ ಗೌರವ; ರಾಜ್ಯದ ಪಂಕಜ್ ಅಡ್ವಾಣಿ ಪದ್ಮ ಭೂಷಣ, ಸೂಲಗಿತ್ತಿ ನರಸಮ್ಮ, ದೊಡ್ಡರಂಗೇಗೌಡ ಪದ್ಮಶ್ರೀ

Pinterest LinkedIn Tumblr

ನವದೆಹಲಿ: ಗಣರಾಜ್ಯೋತ್ಸವ ಮುನ್ನಾ ದಿನವಾದ ಇಂದು ಈ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟವಾಗಿದೆ. ಸಂಗೀತ ಮಾಂತ್ರಿಕ ಇಳಯರಾಜ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಪಂಕಜ್ ಅಡ್ವಾಣಿ ಸೇರಿ ಹಲವು ಗಣ್ಯರು ಪದ್ಮ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ಕರ್ನಾಟಕದ ಆಟಗಾರ ಪಂಕಜ್ ಅಡ್ವಾಣಿ ಪದ್ಮ ಭೂಷಣ ಗೌರವಕ್ಕೆ ಪಾತ್ರರಾದರೆ ಸೂಲಗಿತ್ತಿ ನರಸಮ್ಮ, ಕವಿ ದೊಡ್ಡರಂಗೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಇಳಯರಾಜ, ಗುಲಾಮ್ ಮುಜಾಫಿರ್ ಖಾನ್ ಮತ್ತು ಕೇರಳ ಸಾಹಿತಿ ಪರಮೇಶ್ವರನ್ ಅವರುಗಳು ಪದ್ಮ ವಿಭೂಷಣ ಗೌರವಕ್ಕೆ ಪಾತ್ರರಾದರೆ, ಪಂಕಜ್ ಅಡ್ವಾಣಿ, ಫಿಲಿಪೋಸ್ ಮರ್ ಕ್ಫ್ರಿಸ್ಟೋಸ್ತಮ್, ಮಹೇಂದ್ರ ಸಿಂಗ್ ಧೋನಿ, ಅಲೆಗ್ಸಾಂಡರ್ ಕದಾಕಿನ್, ರಾಮಚಂದ್ರನ್ ನಾಗಸ್ವಾಮಿ, ವೇದ ಪ್ರಕಾಶ ನಂದಾ, ಲಕ್ಷ್ಮಣ್ ಪೈ, ಅರವಿಂದ ಪರೇಖ್, ಶರ್ದಾ ಸಿಂಹ ಅವರುಗಳಿಗೆ ಪದ್ಮ ಭೂಷಣ ಪ್ರಶಸ್ತಿ ಸಂದಿದೆ. ಇದಲ್ಲದೆ ಒಟ್ಟಾರೆ 73 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

“ಇದು ತಮಿಳುನಾಡು ಮತ್ತು ತಮಿಳು ಜನರ ಮೇಲೆ ನರೇಂದ್ರ ಮೋದಿ ಸರ್ಕಾರ ನೀಡಿದ ಗೌರವ,”ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದ ಇಳಯರಾಜ ಹೇಳಿದ್ದಾರೆ.

ಪದ್ಮ ರಶಸ್ತಿಗೆ ಆಯ್ಕೆಯಾದ ಕನ್ನಡಿಗರು
ಪದ್ಮ ಭೂಷಣ
ಪ0ಕಜ್ ಅಡ್ವಾಣಿ
ಪದ್ಮಶ್ರೀ
ಸೂಲಗಿತ್ತಿ ನರಸಮ್ಮ
ದೊಡ್ಡರಂಗೇಗೌಡ
ಸೀತವ್ವ ಜೋದತ್ತಿ
ಇಬ್ಫ್ರಾಹಿಂ ಸುತಾರಾ
ಶ್ರೀ ಸಿದ್ದೇಶ್ವರ ಸ್ವಾಮೀಜಿ
ಆರ್. ಸತ್ಯನಾರಾಯಣ
ರುದ್ರಪಟ್ನಂ ನಾರಾಯಣಸ್ವಾಮಿ ತಾರಾನಾಥನ್
ರುದ್ರಪಟ್ನಂ ನಾರಾಯಣಸ್ವಾಮಿ ತ್ಯಾಗರಾಜನ್

Comments are closed.