
ಹಾಸನ: ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆ ಸಂಬಂಧ ಸರ್ಕಾರದ ವಿರುದ್ಧ ಮತ್ತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗಿದ್ದಾರೆ. ಈ ಸಂಬಂಧ ಎಲೆಕ್ಷನ್ ಕಮಿಷನ್ ಮತ್ತೆ ಪತ್ರ ಬರೆಯುವೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಖಾ ಸುಮ್ಮನೆ ಟೀಕೆ ಮಾಡಲ್ಲ. ಮಸ್ತಕಾಭಿಷೇಕ ಕಾಮಗಾರಿಯನ್ನು PWD ಇಲಾಖೆಯಿಂದ KRDCL ಗೆ ವರ್ಗ ಮಾಡಿದ್ದು ಏಕೆ? ಸಚಿವ ಎ.ಮಂಜು ಸಿಎಂ ಏಜೆಂಟರಾ ಎಂದು ಪ್ರಶ್ನಿಸಿದ್ದಾರೆ.
ಎಲ್ಲದರಲ್ಲೂ ಹಣ ತಿಂದರೆ ಅಜೀರ್ಣವಾಗುವುದಿಲ್ಲವೇ? ಚುನಾವಣಾ ಆಯೋಗದ ನಿರ್ದೇಶನಕ್ಕೂ ಬೆಲೆ ಇಲ್ಲವೇ? ಹೀಗಾದರೆ ನೀವು ನ್ಯಾಯಸಮ್ಮತ ಚುನಾವಣೆ ಹೇಗೆ ನಡೆಸುತ್ತೀರಿ ಎಂದು ಸಿಎಂಗೆ ಪ್ರಶ್ನಿಸಿ, ಎ.ಮಂಜು ಅವರ ಆರೋಪಕ್ಕೆ ನಾನು ಪ್ರತಿಕ್ರಿಯಿಸಲ್ಲ ಎಂದು ತಿಳಿಸಿದರು.
Comments are closed.