ಕರ್ನಾಟಕ

ಸಂಸದರ ಮನೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಪ್ಪಲಿ ನಾಪತ್ತೆ!

Pinterest LinkedIn Tumblr


ಬೆಂಗಳೂರು: ನಗರಕ್ಕೆ ಆಗಮಿಸಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ತಮ್ಮ ಚಪ್ಪಲಿಗಾಗಿ ಹುಡುಕಾಟ ನಡೆಸಿದ ಪ್ರಸಂಗ ನಡೆದಿದೆ.

ವೆಂಕಯ್ಯ ನಾಯ್ಡು ಅವರು ಸಂಸದ ಪಿ.ಸಿ ಮೋಹನ್ ನಿವಾಸದಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದರು. ಆದರೆ, ವೆಂಕಯ್ಯ ನಾಯ್ಡು ಅವರು ಮೋಹನ್ ಅವರ ಮನೆಯಿಂದ ಹೊರಬರುತ್ತಿದ್ದಂತೆ ಅವರ ಚಪ್ಪಲಿ ಕಾಣಲಿಲ್ಲ.

ಈ ವೇಳೆ ಭದ್ರತಾ ಸಿಬ್ಬಂದಿ ಚಪ್ಪಲಿಗಾಗಿ ಎಲ್ಲೆಡೆ ಹುಡುಕಾಡಿದರೂ ಸಿಗದ ಕಾರಣ ಪಕ್ಕದಲ್ಲಿದ್ದ ಬಾಟಾ ಶೋರೂಂಗೆ ಧಾವಿಸಿದ್ದಾರೆ. ಆದರೆ, ಶೋರೂಂ ಬಾಗಿಲು ತೆರೆಯದಿದ್ದ ಕಾರಣ ಶೋಂ ರೂಂ ತೆರೆಯುವ ವರೆಗೂ ಕಾದು ಹೊಸ ಚಪ್ಪಲಿಯನ್ನು ತೆಗೆದುಕೊಂಡು ಬಂದಿದ್ದಾರೆ.

ಕೊನೆಗೂ ಹೊಸ ಚಪ್ಪಲಿ ತರಿಸಿ ಹಾಕಿಕೊಂಡ ವೆಂಕಯ್ಯ ನಾಯ್ಡು ಬೆಂಗಳೂರು ವಿವಿಯತ್ತ ತೆರಳಿದ್ದಾರೆ. ಈ ಘಟನೆಯಿಂದ ಮುಜುಗರಕ್ಕೀಡಾಗಿರುವ ಸಂಸದ ಪಿ.ಸಿ.ಮೋಹನ್‌, ಚಪ್ಪಲಿ ಕಳವು ಆಗಿರಲಿಕ್ಕಿಲ್ಲ ಯಾರೋ ತಪ್ಪಿ ಹಾಕಿಕೊಂಡು ಹೋಗಿರಬಹುದೆಂದು ಸಮರ್ಥಿಸಿಕೊಂಡಿದ್ದಾರೆ.

Comments are closed.