ಕರ್ನಾಟಕ

ಬೆಂಗಳೂರಿನಲ್ಲೊಬ್ಬ ಮಹಿಳೆಯರ ಒಳ ಉಡುಪು ಮೂಸೋ ಸೈಕೋಪಾತ್‍‌ ಪ್ರತ್ಯಕ್ಷ ! ಏನು ಮಾಡಿದ್ದಾನೆ ನೋಡಿ…

Pinterest LinkedIn Tumblr

ಬೆಂಗಳೂರು: ‘ನಮ್ಮ ಮೆಟ್ರೋ’ ರೈಲಿನ ಚಾಲಕಿಯರಿಗೆ ಸೈಕೋಪಾತ್‍‌ನೊಬ್ಬ ಕಿರುಕುಳ ನೀಡಿದ ಘಟನೆ ರಾಜಧಾನಿ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

ಜನವರಿ 10ರ ಮಧ್ಯರಾತ್ರಿ ಬೈಯಪ್ಪನಹಳ್ಳಿ ಬಿಎಂಆರ್‌ಸಿಎಲ್ ಕ್ವಾಟರ್ಸ್‌ನಲ್ಲಿ ನಾಲ್ವರು ಯುವತಿಯರು ವಾಸವಿದ್ದ ಫ್ಲಾಟ್‌ಗೆ ಸೈಕೋಪಾತ್‌ ನುಗಿದ್ದು, ನಿದ್ರೆಯಲ್ಲಿದ್ದ ಯುವತಿಯರ ಪಕ್ಕದಲ್ಲಿ ಕುಳಿತುಕೊಂಡಿದ್ದ. ಬಳಿಕ ಎಚ್ಚರಗೊಂಡ ಓರ್ವ ಯುವತಿ ಗಾಬರಿಯಿಂದ ಕೂಗಿಕೊಂಡಿದ್ದಾರೆ.

ಯಾರು ನೀನು? ಎಲ್ಲಿಂದ ಬಂದಿದ್ದು? ಎಂದು ಯುವತಿಯರು ಸೈಕೋನನ್ನು ಕೇಳಿದ್ದಾರೆ. ಇತ ಮೊದಲು ವಾಚ್‌ಮನ್ ಎಂದು ಹೇಳಿಕೊಂಡಿದ್ದಾನೆ. ಬಳಿಕ ತಾನು ಕಳ್ಳತನ ಮಾಡುತ್ತಿದ್ದು, ಮನೆಯಿಂದ ಹೊರಹಾಕಿದ್ದಾರೆ ಎಂದಿದ್ದಾನೆ.

ಸೈಕೋಪಾತ್ 10 ನಿಮಿಷಗಳ ಕಾಲ ಯುವತಿಯರ ಬಳಿ ಚಾಕು ಹಿಡಿದು ನಿಂತಿದ್ದ. ಬಳಿಕ ಬಾಲ್ಕನಿಗೆ ಹೋಗಿ ಯುವತಿಯರ ಒಳ ಉಡುಪುಗಳನ್ನು ಮೂಸಿ ನೋಡುತ್ತ, ಇದು ನಿನ್ನದಾ?….ಎಂದು ನಾಲ್ವರು ಯುವತಿಯರನ್ನು ಪ್ರಶ್ನಿಸಿದ್ದಾನೆ. ಯುವತಿಯರು ಭಯದಿಂದ ತಮ್ಮದಲ್ಲ ಎಂದು ಹೇಳಿದ್ದು, ಸೈಕೋ ಒಳ ಉಡುಪಗಳನ್ನು ಬಿಸಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ವಿಕೃತ ಮನಸ್ಸಿನ ಸೈಕೋ ಯುವತಿಯರು ವಾಸವಿದ್ದ ಮನೆಯಲ್ಲೇ ಕುಳಿತು ಸಿಗರೇಟ್ ಸೇದಿದ್ದಲ್ಲದೆ, ಅಲ್ಲೇ ಉಗಿದು ಅಟ್ಟಹಾಸ ಮೆರೆದಿದ್ದಾನೆ. ಇತನ ಕೃತ್ಯದಿಂದ ಭಯಭೀತರಾದ ಚಾಲಕಿ ಅರ್ಪಿತಾ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments are closed.