ಕರ್ನಾಟಕ

ಬಳ್ಳಾರಿ:ಕಾಂಗ್ರೆಸ್‌ ಟಿಕೇಟ್‌ ಆಕಾಂಕ್ಷಿಯ ಹತ್ಯೆ ಯತ್ನ!

Pinterest LinkedIn Tumblr


ಬಳ್ಳಾರಿ: ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಸಮರಗಳು ತೀವ್ರಗೊಂಡಿದ್ದು, ಬಳ್ಳಾರಿಯಲ್ಲಿ ಕಾಂಗ್ರೆಸ್‌ ಟಿಕೇಟ್‌ ಆಕಾಂಕ್ಷಿಯಾಗಿದ್ದ ಪಾಲಿಕೆ ಸದಸ್ಯರೊಬ್ಬರ ಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಪಾಲಿಕೆಯ 8 ನೇ ವಾರ್ಡ್‌ ಸದಸ್ಯರಾಗಿರುವ ಹಂದ್ರಾಳ್‌ ಸೀತಾರಾಮ್‌ ಅವರ ಮೇಲೆ 11 ಮಂದಿ ದುಷ್ಕರ್ಮಿಗಳ ಗುಂಪು ಮಾರಾಕಾಯುಧಗಳಿಂದ ದಾಳಿ ನಡೆಸಿದ್ದು, ಖಾರದ ಪುಡಿ,ಲಾಂಗು ಮಚ್ಚುಗಳನ್ನು ಝಳಪಿಸಿದ್ದಾರೆ.

ಈ ವೇಳೆ ಸೀತಾರಾಮ್‌ ಅವರ ಮನೆಯಲ್ಲಿದ್ದ ಬೆಂಬಲಿಗರು ಸ್ಥಳಕ್ಕಾಗಮಿಸಿದ ಕಾರಣ ದಾಳಿ ನಡೆಸುವುದು ಸಾಧ್ಯವಾಗಲಿಲ್ಲ. ದಾಳಿ ನಡೆಸಿದ ಪೈಕಿ ಓರ್ವನನ್ನು ಸೀತಾರಾಮ್‌ ಬೆಂಬಲಿಗರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಪಿಎಂಸಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಯಾವ ಕಾರಣಕ್ಕೆ ದಾಳಿ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.ಆಂಧ್ರದ ಶಿವುಡು, ಪೆದ್ದಣ್ಣ ಮತ್ತು ರವಿ ಎನ್ನುವವರು ಸುಪಾರಿ ನೀಡಿದ್ದರು ಎನ್ನಲಾಗಿದೆ.

-ಉದಯವಾಣಿ

Comments are closed.