ರಾಷ್ಟ್ರೀಯ

ಆರು ಶಿಶು ಹೆತ್ತ 5 ತಿಂಗಳ ಬಸುರಿ; ಎಲ್ಲ ಶಿಶುಗಳ ಸಾವು

Pinterest LinkedIn Tumblr


ಮೇದಿನೀನಗರ, ಜಾರ್ಖಂಡ್‌ : 32ರ ಹರೆಯದ ಮಹಿಳೆಯೊಬ್ಬಳು ಆರು ಮಕ್ಕಳನ್ನು ಹೆತ್ತಳಾದರೂ ಅವೆಲ್ಲವೂ ಕೆಲವೇ ನಿಮಿಷಗಳಲ್ಲಿ ಮೃತಪಟ್ಟ ಅತ್ಯಂತ ದುರ್ದೈವದ ಘಟನೆ ವರದಿಯಾಗಿದೆ.

ಗಢವಾ ಜಿಲ್ಲೆಯ ಖಾರ್‌ಸೋತಾ ಗ್ರಾಮದ ನಿವಾಸಿಯಾಗಿರುವ ಸರಿತಾ ದೇವಿ ಐದು ತಿಂಗಳ ಬಸುರಿಯಾಗಿದ್ದರು. ತೀವ್ರ ಪ್ರಸವ ವೇದನೆ ಕಾಣಿಸಿಕೊಂಡ ಆಕೆಯನ್ನು ತತ್‌ಕ್ಷಣವೇ ಸ್ಥಳೀಯ ನರ್ಸಿಂಗ್‌ ಹೋಮ್‌ಗೆ ದಾಖಲಿಸಲಾಯಿತು. ಅಲ್ಲಿ ಆಕೆಯ 3 ಗಂಡು 3 ಹೆಣ್ಣು ಮಗುವನ್ನು ಹೆತ್ತಳು. ಆದರೆ ನಿಮಿಷಾರ್ಧದಲ್ಲಿ ಅವೆಲ್ಲವೂ ಮೃತಪಟ್ಟವು.

ಅವಧಿಗೆ ಸಾಕಷ್ಟು ಮುನ್ನವೇ ಆರು ಮಗುವನ್ನು ಹೆತ್ತ ಸರಿತಾ ದೇವಿ ಅವರ ದೇಹ ಸ್ಥಿತಿ ಈಗ ಚಿಂತಾಜನಕವಿದೆ; ವೈದ್ಯರನ್ನು ಆಕೆಯನ್ನು ಉಳಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

-ಉದಯವಾಣಿ

Comments are closed.