
ಬೆಂಗಳೂರು: ಬೆಂಗಳೂರಿನ ಕಲಾಸಿ ಪಾಳ್ಯದ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ಅಗ್ನಿ ದುರಂತ ಪ್ರಕರಣ ಸಂಬಂಧ ಪರಾರಿಯಾಗಿದ್ದ ಬಾರ್ ಮಾಲೀಕ ದಯಾಶಂಕರ್ ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಐವರ ಸಾವಿಗೆ ಕಾರಣವಾಗಿದ್ದ ಅಗ್ನಿ ದುರಂತ ಪ್ರಕರಣ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಪರಾರಿಯಾಗಿದ್ದ ಬಾರ್ ಮಾಲೀಕ ಆರ್.ವಿ.ದಯಾಶಂಕರ್ ಎಂಬುವವರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬೆಳಗ್ಗೆಯಷ್ಟೇ ಪ್ರಕರಣ ಸಂಬಂಧ ಪೊಲೀಸರು ಕೈಲಾಶ್ ಬಾರ್ ಮಾಲೀಕ ಆರ್ ವಿ ದಯಾಶಂಕರ್ ಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಕರೆ ಸ್ವೀಕರಿಸಿದ್ದ ದಯಾಶಂಕರ್ ವಿಚಾರಣೆಗೆ ಹಾಜರಾಗುವುದಾಗಿ ಹೇಳಿ ಫೋನ್ ಕಟ್ ಮಾಡಿದ್ದ. ಆದರೆ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ.
ದಯಾಶಂಕರ್ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆತನ ನಿವಾಸ ಮತ್ತು ಆಪ್ತರ ಮನೆಗಳ ಮೇಲೆ ಕಣ್ಣಿಟ್ಟಿದ್ದರು. ಇದೀಗ ಕಲಾಸಿಪಾಳ್ಯ ಪೊಲೀಸರು ದಯಾಶಂಕರ್ ನನ್ನು ಬಂಧಿಸಿದ್ದಾರೆ.
ಇನ್ನು ಪಾರ್ಶವಾಯುವಿಗೆ ತುತ್ತಾಗಿರುವ ದಯಾನಂದ್ ಬಾರ್ ಅನ್ನು ಬೇರೊಬ್ಬರಿಂದ ನಡೆಸುತ್ತಿದ್ದರಂತೆ. ಕಳೆದ 10 ವರ್ಷಗಳಿಂದ ದಯಾನಂದ್ ಅವರ ಆಪ್ತ ಸೋಮಶೇಖರ್ ಎಂಬುವವರು ಈ ಬಾರ್ ಅನ್ನು ನೋಡಿಕೊಳ್ಳುತ್ತಿದ್ದರಂತೆ.
Comments are closed.