ಕರ್ನಾಟಕ

ಬಶೀರ್ ಕೊಲೆ ದೀಪಕ್‌ ಕೊಲೆಗೆ ಉತ್ತರವಲ್ಲ: ಪ್ರತಾಪ್ ಸಿಂಹ

Pinterest LinkedIn Tumblr


ಬೆಂಗಳೂರು: ‘ಕಣ್ಣಿಗೆ ಕಣ್ಣು ಎಂದು ಪಾಲಿಸಿದರೆ ಇಡೀ ಪ್ರಪಂಚ ಕುರುಡಾಗುವುದು. ದೀಪಕ್‌ ಕೊಲೆಗೆ ಬಶೀರ್ ಕೊಲೆ ಉತ್ತರವಲ್ಲ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಶಾಂತಿ ತರುವ ಪ್ರಯತ್ನ ಮಾಡುತ್ತಿಲ್ಲ ಆದ್ದರಿಂದ ಹಿಂದೂ-ಮುಸ್ಲಿಂ ಶಾಂತಿ ಸಭೆ ನಡೆಸಬೇಕಾಗಿದೆ’ ಎಂದು ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

ದೀಪಕ್‌ ರಾವ್‌ ಕೊಲೆ ನಡೆದ ದಿನದಂದು ಕೊಟ್ಟಾರದಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಆಕಾಶಭವನದ ನಿವಾಸಿ ಬಶೀರ್ (48) ಅವರ ಮೇಲೆ ತಲ್ವಾರ್‌ ದಾಳಿ ನಡೆಸಿದ್ದರು.

ತೀವ್ರ ಗಾಯಗೊಂಡಿದ್ದ ಅವರಿಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಜೀವನ್ಮರಣದ ಹೋರಾಟ ಮಾಡುತ್ತಿದ್ದ ಬಶೀರ್‌ ಭಾನುವಾರ ಬೆಳಗ್ಗೆ ನಿಧನರಾದರು.

Comments are closed.