ಕರ್ನಾಟಕ

ಎಲ್ಲರೂ ಪಾರ್ಟಿ ಮಾಡಿದ್ರೆ ಜಗ್ಗೇಶ್ ಹೊಸ ವರ್ಷದಂದು ಏನು ಮಾಡಿದ್ರು ಗೊತ್ತಾ?

Pinterest LinkedIn Tumblr


ಬೆಂಗಳೂರು: ಇಂದು ವರ್ಷದ ಆರಂಭದ ದಿನ. ನಿನ್ನೆ ತಡರಾತ್ರಿಯಿಂದಲೇ ಪಾರ್ಟಿ ಜೋರಾಗಿ ನಡೆಯುತ್ತಿದೆ. ಸೆಲೆಬ್ರಿಟಿಗಳು ಸೇರಿದಂತೆ, ಸಾಮಾನ್ಯರೂ ಪಾರ್ಟಿ ಮಾಡುವಲ್ಲಿ ಬ್ಯುಸಿ. ಆದರೆ ನವರಸನಾಯಕ ಜಗ್ಗೇಶ್ ಮಾತ್ರ ಡಿಫರೆಂಟಾಗಿ ಹೊಸ ವರ್ಷ ಬರಮಾಡಿಕೊಂಡಿದ್ದಾರೆ.

ಆಧ್ಯಾತ್ಮಿಕವಾಗಿ ಹೆಚ್ಚು ಒಲವಿರುವ ಜಗ್ಗೇಶ್ ಇಂದು ತಮ್ಮ ಮನೆಯಲ್ಲಿ ಹೋಮ ಮಾಡಿಸುತ್ತಿದ್ದಾರೆ. ಹಿರಿಯ ಪುರೋಹಿತರು ಚಂದ್ರಶೇಖರ ಭಟ್ಟರು ನನ್ನ ತಂದೆ ಸಮಾನರು. ನಮ್ಮ ಮನೆಯಲ್ಲಿ 30 ವರ್ಷಗಳಿಂದ 900 ಕ್ಕೂ ಹೆಚ್ಚು ಹೋಮ ಮಾಡಿ ಹರಸಿದ್ದಾರೆ. ಅವರಿಂದ ನಿಮಗೂ ಶುಭ ಹಾರೈಕೆಗಳು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಪುರೋಹಿತರ ಕೈಯಿಂದಲೇ ವಿಡಿಯೋ ಸಂದೇಶದ ಮೂಲಕ ಹೊಸ ವರ್ಷದ ಶುಭಾಷಯ ಕೋರಿದ್ದಾರೆ. ಪತ್ನಿ ಸಮೇತರಾಗಿ ಜಗ್ಗೇಶ್ ಕಚ್ಚೆ ಪಂಚೆ ಹಾಕಿಕೊಂಡು ಪೂಜಾ ಕಾರ್ಯ ನೆರವೇರಿಸಿದ್ದಾರೆ.

Comments are closed.