ಕರ್ನಾಟಕ

ಆಸ್ಪತ್ರೆಯಿಂದ ಸಿನಿಮೀಯ ಮಾದರಿಯಲ್ಲಿ ಕೈದಿ ಪರಾರಿ

Pinterest LinkedIn Tumblr


ಮಡಿಕೇರಿ: ಇಲ್ಲಿನ ಜಿಲ್ಲಾಸ್ಪತ್ರೆಯಿಂದ ಕೈದಿಯೊಬ್ಬ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದಾನೆ.

ಸುಂಟಿಕೊಪ್ಪ ನಿವಾಸಿ ಗಣೇಶ್(ಗಣಪತಿ) ತಪ್ಪಿಸಿಕೊಂಡ ಕೈದಿ. ಈತ ಸುಂಟಿಕೊಪ್ಪದಲ್ಲಿ ನಡೆದ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ. ಡಿ.30ರಂದು ಜೈಲಿನಲ್ಲಿ ಫಿನಾಯಿಲ್ ಸೇವಿಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ.

ಆರೋಪಿ ಬೆಳಗ್ಗೆ ಆಸ್ಪತ್ರೆಯ ಶೌಚಾಲಯದ ಕಿಟಕಿ ಮೂಲಕ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.