ಕರ್ನಾಟಕ

ತ್ರಿವಳಿ ತಲಾಕ್ ನಿಷೇಧ ಒಂದು ಡೇಂಜರಸ್ ಗೇಮ್ ಪ್ಲಾನ್: ಓವೈಸಿ

Pinterest LinkedIn Tumblr


ಬಾಗಲಕೋಟೆ: ಎಐಎಂಐಎಂ ಸಂಸ್ಥಾಪಕ ಅಧ್ಯಕ್ಷ ಓವೈಸಿ ತ್ರಿವಳಿ ತಲಾಕ್ ಮಂಡನೆ ವಿಚಾರಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದು, ಇದೊಂದು ಮೂಲಭೂತ ಹಕ್ಕುಗಳ ದಮನಕಾರಿ ನೀತಿ ಎಂದು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಕ್ಕೆ ಭೇಟಿ ನೀಡುರುವ ಮಹ್ಮದ್ ಅಸಾದುದ್ದಿನ್ ಓವೈಸಿ ತ್ರಿವಳಿ ತಲಾಖ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ದ ಕಿಡಿ ಕಾರಿದ್ದು, ಒಂದು ವೇಳೆ ಇದೇ ಆದೇಶದ ಪ್ರಕಾರ ತಲಾಕ್ ನೀಡಿದರೂ ಮದುವೆ ರದ್ದಾಗುವುದಿಲ್ಲ ಮದುವೆ ರದ್ದಾಗದೆ ಇದ್ದರೆ ಪತಿಯನ್ನು ಬಂಧಿಸೋಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

‘ತ್ರಿವಳಿ ತಲಾಕ್ ನಿಷೇಧ ಒಂದು ಡೇಂಜರಸ್ ಗೇಮ್ ಪ್ಲಾನ್, ಈ ಬಿಲ್ ಬಗ್ಗೆ ಒಂದು ಆಯ್ಕೆ ಸಮಿತಿ ರಚಿಸಬೇಕು. ಅಲ್ಲಿ ಮೊದಲು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇದು ಮೂಲಭೂತ ಹಕ್ಕು ಗಳ ದಮನಕಾರಿ ನೀತಿ ಮತ್ತು ಹಕ್ಕುಗಳ ಉಲ್ಲಂಘನೆಯಾಗಿದೆ. ಇದೊಂದು ಕೇಂದ್ರದ ಮೋಸದ ಮತ್ತು ಕೆಟ್ಟದಾದ ಮಸೂದೆ ಹೀಗಾಗಿ ಹೆಣ್ಣುಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತದೆ. ಇದು ಪರಿಚ್ಚೇಧ 14ರ ಉಲ್ಲಂಘನೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿಯ ಈ ನಿರ್ಧಾರಕ್ಕೆ ಜಾತ್ಯಾತೀತ ಎಂದು ಹೇಳುವ ಪಕ್ಷಗಳು ಬೆಂಬಲಿಸುತ್ತಿವೆ. ಕಾಂಗ್ರೆಸ್, ಟಿ ಎಮ್ ಸಿ, ಸೇರಿದಂತೆ ಕೆಲ ಪಕ್ಷಗಳು ಬೆಂಬಲಿಸುತ್ತಿರೋದು ಖಂಡನೀಯ’ ಎಂದು ತ್ರಿವಳಿ ತಲಾಖ್‌ ಆದೇಶದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದೇ ವೇಳೆ ಕನಾ೯ಟಕದಲ್ಲಿ ವಿಧಾನಸಭೆಗೆ ಎಂಐಎಂ ಸ್ಫಧೆ೯ ಮಾಡೋ ವಿಚಾರ ಹೊರ ಹಾಕಿದ ಓವೈಸಿ, ರಾಜ್ಯದಲ್ಲಿ ಈ ಬಾರಿ ಎಲ್ಲೆಡೆ ಎಂಐಎಂ ಸ್ಫರ್ಧೆ ಮಾಡುತ್ತದೆ. ಆದರೆ ಎಮ್‌ಐಎಮ್‌ ಪಕ್ಷ ಅಭ್ಯರ್ಥಿ ಆಯ್ಕೆ ವಿಚಾರವನ್ನು ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಕೈಗೊಳ್ಳುತ್ತಾರೆ. ಅವರು ಹೇಳಿದ ಅಭ್ಯರ್ಥಿಗೆ ಬೆಂಬಲಿಸಿ ಸಹಿ ಮಾಡೋದು ಮಾತ್ರ ನನ್ನ ಕೆಲಸ ಎಂದು ಓವೈಸಿ ಹೇಳಿದ್ದಾರೆ.

Comments are closed.