ಕರ್ನಾಟಕ

ಎಂಜಿ, ಬ್ರಿಗೇಡ್‌ ರೋಡ್‌ಗಳಲ್ಲಿ NYE: ಮಹಿಳೆಯರ ನಿರಾಸಕ್ತಿ

Pinterest LinkedIn Tumblr


ಬೆಂಗಳೂರು: ಕಳೆದ ಬಾರಿ ಹೊಸ ವರ್ಷಾಚರಣೆ ವೇಳೆ ನಡೆದ ಕಹಿ ಘಟನೆಗಳಿಂದ ಎಚ್ಚೆತ್ತಿರುವ ಹಲವರು ಈ ಬಾರಿ ಎಂ.ಜಿ ರಸ್ತೆ, ಬ್ರಿಗೇಡ್‌ ರೋಡ್‌ ಹಾಗೂ ಚರ್ಚ್‌ ಸ್ಟ್ರೀಟ್‌ ಮತ್ತಿತರೆಡೆ ಪಾಟಿ, ಮಜಾ ನಡೆಸುವುದರಿಂದ ದೂರವುಳಿಯಲು ನಿರ್ಧರಿಸಿದ್ದಾರೆ. ಏನೇ ಸಂಭ್ರಮವಿದ್ದರೂ ಮನೆಯಲ್ಲೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಅದೇ ರೀತಿ ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳತ್ತಿದ್ದು, ನಗರದಾದ್ಯಂತ 15 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಕಳೆದ ಬಾರಿ ಎಂಜಿ ರೋಡ್‌ನಲ್ಲಿ ಯುವತಿಯನ್ನು ಪಾನಮತ್ತರ ಗುಂಪು ಎಳೆದಾಡುತ್ತಿದ್ದು, ಆಕೆ ಸಹಾಯಕ್ಕಾಗಿ ಕೂಗುತ್ತಿದ್ದರೂ ಯಾರೂ ನೆರವಿಗೆ ಬರಲಿಲ್ಲ. ಎಲ್ಲರೂ ತಮ್ಮತಮ್ಮ ರಕ್ಷಣೆಯಲ್ಲೇ ಮಗ್ನರು ಇಲ್ಲವೇ ಬೇರೆಯವರನ್ನು ಕೀಟಲೆ ಮಾಡುವುದರಲ್ಲಿ ತೊಡಗಿದ್ದರು. ಆದರೆ ನನ್ನಿಂದ ಕೂಡ ಆಕೆಗೆ ಸಹಾಯ ಮಾಡಲಾಗಲಿಲ್ಲ. ಇನ್ನೆಂದಿಗೂ ಆ ರಸ್ತೆಗಳಲ್ಲಿ ಹೊರ ವರ್ಷಾಚರಣೆಗೆ ಹೋಗಲಾರೆ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ದೀಕ್ಷಾಗುಪ್ತಾ ಹೇಳಿದ್ದಾರೆ.

‘ಕಳೆದ ವರ್ಷ ಹೊಸ ವರ್ಚಾಚರಣೆ ವೇಳೆ ನನ್ನ ಸೋದರಿಯನ್ನು ಕೆಲವರು ಕೀಟಲೆ ಮಾಡಿದ್ದರು. ದೂರು ನೀಡಲೆಂದು ಠಾಣೆಗೆ ಹೋಗಿದ್ದು, ಕೀಟಲೆ ಮಾಡಿದರ ಗುರುತು ಪತ್ತೆ ಹಚ್ಚಲಾಗದ ಕಾರಣ ಪೊಲೀಸರು ಹೆಚ್ಚೇನು ಕ್ರಮಕ್ಕೆ ಮುಂದಾಗಲಿಲ್ಲ, ಎಂದು ಪದ್ಮಿನಿ ಹೇಳುತ್ತಾರೆ.

‘ಮಹಿಳಾ ಪೊಲೀಸರು ಇರುವುದರಿಂದ ತೊಂದರೆಯಾಗದು ಎಂದು ಹೇಳುತ್ತಿದ್ದರೂ ಪರಿಸ್ಥಿತಿ ನಿಭಾಯಿಸಲು ಪೊಲೀಸರಿಂದ ಆಗುವುದಿಲ್ಲ,’,ಎಂಬುದು ಅವರ ಅಭಿಪ್ರಾಯ.

ಮನೆಯ ಸದಸ್ಯರೆಲ್ಲರೂ ಹೊಸ ವರ್ಷಾಚರಣೆಯ ಪಾರ್ಟಿಗೆ ಹೋಗುವುದನ್ನು ವಿರೋಧಿಸುತ್ತಾರೆ. ಈಗ ಯಾವುದೇ ಹಬ್ಬದ ಸಂದರ್ಭಗಳಲ್ಲೂ ಬ್ರಿಗೇಡ್‌ ರೋಡ್‌ಗೆ ಹೋಗುವುದನ್ಉ ಆದಷ್ಟು ತಪ್ಪಿಸುತ್ತೇನೆ ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ ಸನ್ಏಹಿತರ ಜತೆ ಚರ್ಚ್‌ ಸ್ಟ್ರೀಟ್‌ ಕ್ಲಬ್‌ನಲ್ಲಿ ಪರಾತ್ರಿ ಪಾರ್ಟಿ ಮುಗಿಸಿ ಹೊರ ಬಂದು ಕ್ಯಾಬ್‌ ಹುಡುಕಾಡುವಾಗ ಬೈಕ್‌ಗಳಲ್ಲಿ ಬಂದ ಯುವಕರ ಗುಂಪು ಹತ್ತಿರಕ್ಕೆ ಬಂದು ಕೆಟ್ಟದಾಗಿ ಮಾತನಾಡುತ್ತ, ತೀರಾ ಹತ್ತಿರ ಗಾಡಿ ತರುತ್ತಿದ್ದು, ಅದೊಂದು ಅಸಹ್ಯಕರ ವಾತಾವರಣವಾಗಿತ್ತು ಎಂದು ವಿದ್ಯಾರ್ಥಿನಿ ವಿದ್ಯಾ ವಿಜಯ್‌ ಹೇಳುತ್ತಾರೆ.

ಇಂಥ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಬಯಸುವುದಿಲ್ಲ. ಕಳೆವ ವರ್ಷ ಪಾರ್ಟಿಯಲ್ಲಿ ಸ್ನೇಹಿತೆಯೊಬ್ಬಳಿಗೆ ಯುವಕನೊಬ್ಬ ಕಿರುಕುಳ ನೀಡಿರುವುದು ನನಗೆ ಗೊತ್ತಾಗಿದೆ. ಆದರೆ ಅವಳು ಅನ್ನು ಯಾರಲ್ಲೂ ಹೇಳಿಕೊಳ್ಳುವಷ್ಟು ಧೈರ್ಯ ತೋರುತ್ತಿಲ್ಲ ಎಂದು ಪ್ರಿಯಾಂಶಿ ಗಾರ್ಗ್‌ ಹೇಳಿದ್ದಾರೆ.

ಆಕರ್ಷಣೆಯ ತಾಣ ಬ್ರಿಗೇಡ್‌ ರೋಡ್‌ನಲ್ಲಿ ನನ್ನ ಸ್ನೇಹಿತರಿಗೆ ಕಳೆದ ವರ್ಷ ತೀರಾ ಕೆಟ್ಟ ಅನುಭವಗಳಾಗಿವೆ, ಹೀಗಾಗಿ ನಾನು ಮತ್ತೊಮ್ಮೆ ಆ ಕಡೆ ಹೋಗಲಾರೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಅವನಿ ಆರ್ಯ ಹೇಳಿದ್ದಾರೆ.

Comments are closed.