ಕರ್ನಾಟಕ

ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು: ಈಶ್ವರಪ್ಪ ಆರೋಪ

Pinterest LinkedIn Tumblr

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು ಎಂದು ಪ್ರತಿ ಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಉಡುಪಿಗೆ ಹೋಗಿಯೂ ಶ್ರೀಕೃಷ್ಣನ ದರ್ಶನ ಮಾಡದ ಸಿದ್ದರಾಮಯ್ಯ ಟಿಪ್ಪು ಸುಲ್ತಾನ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ ಎಂದಿದ್ದಾರೆ.

ಇತ್ತೀಚೆಗೆ ದೇವರ ಮೇಲೆ ಸಿದ್ದರಾಮಯ್ಯ ಅವರಿಗೆ ಭಕ್ತಿ ಬಂದಂತೆ ಕಾಣುತ್ತಿದೆ. ಆದರೆ, ಉಡುಪಿಗೆ ಭೇಟಿ ಕೊಟ್ಟ ಸಂದರ್ಭ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಲು ಆಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಗೋಡೆ ಒಡೆದು ಕಿಂಡಿಯ ಮೂಲಕ ಭಕ್ತನಿಗೆ ದರ್ಶನ ನೀಡಿದ ಕನಕದಾಸರ ರಕ್ತವನ್ನು ಹಂಚಿಕೊಂಡು ನಾನು ಹುಟ್ಟಿದವನು ಎಂದಿರುವ ಈಶ್ವರಪ್ಪ ಶ್ರೀ ಕೃಷ್ಣನ ದರ್ಶನ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಸುಲ್ತಾನ್‌ ರಕ್ತ ಹಂಚಿಕೊಂಡು ಹುಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Comments are closed.