ರಾಷ್ಟ್ರೀಯ

ಪುಟ್ಟ ಬಾಲಕಿ ಜೊತೆ ಕಾಮದಾಟವಾಡಿ 5 ರೂ. ಕೊಟ್ಟು ಬಾಯಿ ಮುಚ್ಚಿಸಿದ ವೃದ್ಧ! ಮುಂದೆ ಆದದ್ದೇ ಬೇರೆ…

Pinterest LinkedIn Tumblr

ನವದೆಹಲಿ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಅವರಿಗೆ 5 ರೂ. ಕೊಟ್ಟು ಬಾಯಿ ಮುಚ್ಚಿಕೊಂಡಿರುವಂತೆ ಬೆದರಿಕೆ ಹಾಕಿದ ಆರೋಪದಲ್ಲಿ ದೆಹಲಿ ಪೊಲೀಸರು 60 ವರ್ಷದ ವೃದ್ಧನೊಬ್ಬನನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಜೈನುಲ್ ಎಂಬಾತನೇ ಆರೋಪಿ. ಈತ ತನ್ನ ಮನೆಯ ಹೊರಗೆ ಆಟವಾಡಿಕೊಂಡಿದ್ದ 5 ವರ್ಷ ಮತ್ತು 9 ವರ್ಷ ವಯಸ್ಸಿನ ಬಾಲಕಿಯರನ್ನು ಚಾಕಲೇಟ್ ಆಸೆ ತೋರಿಸಿ ಮನೆಯೊಳಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧನ ಬೆದರಿಕೆಯಿಂದಾಗಿ ಬಾಲಕಿಯರಿಬ್ಬರೂ ಸಂಜೆಯವರೆಗೆ ಘಟನೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಆದರೆ ರಾತ್ರಿ ವೇಳೆ 5 ವರ್ಷದ ಬಾಲಕಿ ನೋವಿನಿಂದ ಅಳುತ್ತಿದ್ದಾಗ ಬಾಲಕಿಯ ತಾಯಿಗೆ ಗುಪ್ತಾಂಗದಲ್ಲಿ ಗಾಯ ಪತ್ತೆಯಾಗಿದೆ. ವಿಚಾರಿಸಿದಾಗ ಬಾಲಕಿಯರು ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ಈ ಇಬ್ಬರು ಬಾಲಕಿಯರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Comments are closed.