ಕರ್ನಾಟಕ

ಪತ್ನಿ ಸುಂದರವಾಗಿದ್ದಾಳೆಂದು ಶಿಕ್ಷಕ ಪತಿ ಮಾಡಿದ್ದೇನು ಗೊತ್ತಾ?

Pinterest LinkedIn Tumblr


ಬಳ್ಳಾರಿ: ಇಲ್ಲೊಬ‌್ಬ ಗೃಹಿಣಿಗೆ ಆಕೆಯ ಅಂದ–ಚಂದವೇ ಮುಳುವಾಗಿದ್ದು, ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಶಿಕ್ಷಕನಾಗಿರುವ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಚೆನ್ನಗಿರಿಯ ಹೆಬ್ಬಾಳಗೇರಿಯ ನೇತ್ರಾವತಿಯೊಂದಿಗೆ ಒಂದು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದ ಹೂವಿನಹಡಗಲಿ ತಾಲೂಕಿನ ಕುಂಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್ ಪತ್ನಿಯನ್ನು ನೇಣು ಬಿಗಿದು ನಂತರ ಹೃದಯಾಘಾತವೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಪತ್ನಿ ಸುಂದರವಾಗಿದ್ದಾಳೆ, ಆಕೆಗೆ ಮೊಬೈಲ್ ನೀಡಿದರೆ ಬೇರೆಯವರ ಜೊತೆ ಮಾತನಾಡುತ್ತಾಳೆ ಎಂದು ಅನುಮಾನ ಪಡುತ್ತಿದ್ದ ಶಿಕ್ಷಕ ಹಡಗಲಿಯ ಇಸ್ಲಾಂಪೇಟೆಯ ಮನೆಯಲ್ಲಿ ಹಲ್ಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಪತ್ನಿಗೆ ಹೃದಯಾಘಾತವಾಗಿದೆ ಎಂದು ಬೀಗರಿಗೆ ಫೋನ್ ಮಾಡಿ ಕರೆಸಿದ್ದಾನೆ.

ನೇತ್ರಾವತಿಯ ಪೋಷಕರು ಅಳಿಯನ ಮನೆಗೆ ಬಂದು ನೋಡಿದಾಗ ಮಗಳನ್ನು ನೇಣು ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ರಾಜಿ ಮಾಡಿಸುವ ಪ್ರಯತ್ನ ನಡೆಸಿದ ನಾಗರಾಜ್ ರಾಜಿಯಾಗದ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿದ್ದಾನೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.