ಕರ್ನಾಟಕ

ಕಲಬುರ್ಗಿ: ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರು ಮಲ್ಲಿಕಾರ್ಜುನ, ಅರ್ಜುನ ಸೇರಿ 9 ಜನರ ಬಂಧನ; 20 ನಾಡ ಪಿಸ್ತೂಲ್‌ ವಶಕ್ಕೆ

Pinterest LinkedIn Tumblr

ಕಲಬುರ್ಗಿ: ಜಿಲ್ಲೆಯಲ್ಲಿ ಒಂಬತ್ತು ಜನರನ್ನು ಬಂಧಿಸಿರುವ ಪೊಲೀಸರು ಅವರಿಂದ 20 ನಾಡ ಪಿಸ್ತೂಲ್‌ ಹಾಗೂ 54 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಬಂಧಿತರಲ್ಲಿ ಮಲ್ಲಿಕಾರ್ಜುನ ಮತ್ತು ಅರ್ಜುನ ಎಂಬಿಬ್ಬರು ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರು. ಇವರು ಭೀಮಾ ತೀರದ ಅಫಜಲಪುರ ಭಾಗದಲ್ಲಿ ಇನ್ನೂ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿದ್ದರು’ ಎಂದು ಐಜಿಪಿ ಅಲೋಕಕುಮಾರ್‌ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಕ್ರಮ ನಾಡ ಪಿಸ್ತೂಲ್‌ಗಳು ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶಗಳಿಂದ ಪೂರೈಕೆಯಾಗುತ್ತಿವೆ. ಮಧ್ಯಪ್ರದೇಶದಲ್ಲಿ ಅಕ್ರಮ ನಾಡ ಪಿಸ್ತೂಲ್‌ ತಯಾರಿಕೆ ಗುಡಿ ಕೈಗಾರಿಕೆಯ ಮಾದರಿಯಲ್ಲಿ ನಡೆಯುತ್ತಿದೆ. ಅಲ್ಲಿಂದ ನಮ್ಮ ರಾಜ್ಯಕ್ಕೆ ಇವು ಪೂರೈಕೆಯಾಗುವುದನ್ನು ತಡೆಯಲು ಕಲಬುರ್ಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ನೇತೃತ್ವದ ತಂಡವನ್ನು ಅಲ್ಲಿಗೆ ಕಳಿಸಲಾಗುವುದು ಎಂದರು.

₹1 ಲಕ್ಷ ನಗದು ಬಹುಮಾನ

ಈ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಂಡಕ್ಕೆ ₹1 ಲಕ್ಷ ನಗದು ಬಹುಮಾನ ನೀಡಿದ ಅವರು, ಮುಖ್ಯಮಂತ್ರಿಗಳ ಪದಕಕ್ಕೆ ಕಲಬುರ್ಗಿಯ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಅವರ ಹೆಸರು ಶಿಫಾರಸು ಮಾಡುವುದಾಗಿ ತಿಳಿಸಿದರು.

Comments are closed.