ಕರಾವಳಿ

ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಉಚಿತ ವೈದ್ಯಕೀಯ ಶಿಬಿರ : 700ಕ್ಕೂ ಹೆಚ್ಚು ಮಂದಿಯಿಂದ ಆರೋಗ್ಯ ತಪಾಸಣೆ

Pinterest LinkedIn Tumblr

ಮಂಗಳೂರು,ಡಿಸೆಂಬರ್.04 : ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ (ರಿ) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧ ಪೀಠ (ರಿ) ಮಜಿಲ ಪಟ್ಟಂಬರ ಬೀಡು, ಕನಕಪುರ, ಸೂಟರ್‌ಪೇಟೆ, ಮಂಗಳೂರು, ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈ.ಲಿ.ಬೆಂಗಳೂರು ಇವರ ಸಹಕಾರದೊಂದಿಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದಕೀಯ ಶಿಬಿರ ಮತ್ತು ಯೇನಪೋಯ ದಂತ ವೈದ್ಯಕೀಯ ಆಸ್ಪತ್ರೆ, ದೇರಳಕಟ್ಟೆ ಇವರ ವೈದ್ಯರ ತಂಡದವರಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮತ್ತು ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈ.ಲಿ ಮಂಗಳೂರು ಸದಸ್ಯರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಡಿ.3ರ ಬಾನುವಾರದಂದು ಬೆಳಿಗ್ಗೆ ಸೂಟರ್‌ಪೇಟೆಯ ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧ ಪೀಠ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧ ಪೀಠದ ಧರ್ಮಧರ್ಶಿ ಪ್ರವೀಣ್ ರಾಜ್ ಮಂಚೇಂದ್ರನಾಥ್ ಬಾಬಾ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಎಮ್.ಪದ್ಮನಾಭ ಪೈ ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ರಾಜ್ಯ ಸೇವಾ ಸಂಯೋಜಕಿ ಶ್ರೀಮತಿ ಪ್ರಿಯ ಪಿ.ಪೈ ಅವರು ದೀಪ ಬೆಳಗಿಸುವ ಮೂಲಕ ವೈದಕೀಯ ಶಿಬಿರಕ್ಕೆ ಚಾಲನೆ ನೀಡಿದರು.

ಕೆ‌ಎಮ್‌ಸಿ ಆಸ್ಪತ್ರೆಯ ಡಾ.ಅಭಿನವ್, ಪಿಆರ್‌ಓ ಹರ್ಭರ್ಟ್, ಯೆನೆಪೋಯ ಆಸ್ಪತ್ರೆಯ ಡಾ. ಪ್ರವೀಣ್ ಜೋಡಾಲಿ, ಪಿಆರ್‌ಓ ಭರತ್, ರಾಯಲ್ ಹಾಲಿಡೆಸ್‌ನ ರಾಜೇಶ್ ಗುರುಪುರ, ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಸದಸ್ಯರಾದ ಎಸ್.ಶೇಖರ್ ಅಮೀನ್, ಹರೀಶ್, ಪ್ರಭಾಕರ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ವೈದ್ಯಕೀಯ ಶಿಬಿರದ ಜಿಲ್ಲಾ ಸಂಘಟಕರಾದ ಸುರೇಶ್ ಬೈಂದೂರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಚರ್ಮ, ಎಲುಬು, ಕಣ್ಣು, ಮಕ್ಕಳ ಚಿಕಿತ್ಸೆ , ಕಿವಿ, ಮೂಗು, ಗಂಟಲು, ಸ್ರೀ ರೋಗ ಚಿಕಿತ್ಸೆ ಮತ್ತು ಜನರಲ್ ಚೆಕಪ್ ಹಾಗೂ ದಂತ ತಪಾಸಣೆ ಮತ್ತು ಚಿಕಿತ್ಸೆ ಯನ್ನು ಹಮ್ಮಿಕೊಳ್ಳಲಾಗಿತ್ತು.

ಡಯಾಬಿಟಿಕ್ ಸ್ಪೆಶಾಲಿಟ್ ಸೆಂಟರ್‌ನ ಡಾ.ಮೋಹನ್ ಇವರಿಂದ ಉಚಿತ ರಕ್ತ ತಪಾಸಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಗತ್ಯವುಳ್ಳ ಕಣ್ಣಿನ ರೋಗಿಗಳಿಗೆ ಕನ್ನಡಕವನ್ನು ಉಚಿತವಾಗಿ ವಿತರಿಸಲಾಯಿತು. ಹಾಗೂ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡುವ ಬಗ್ಗೆ ಪ್ರಕಟಿಸಲಾಯಿತು. ಸುಮಾರು 700ಕ್ಕೂ ಹೆಚ್ಚು ಮಂದಿ ಶಿಬಿರದ ಉಪಯೋಗ ಪಡೆದರು. 60ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮೊಬೈಲ್ ನಂಬ್ರ : 9035089084

Comments are closed.