ಕರ್ನಾಟಕ

ಅಂತರ್ಜಾತಿ ವಿವಾಹವಾಗಿದ್ದ ಜೋಡಿಯ ಅನುಮಾನಾಸ್ಪದ ಸಾವು

Pinterest LinkedIn Tumblr

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ-ಐಹೊಳೆ ಮಧ್ಯದ ರಸ್ತೆಯಲ್ಲಿ ದಂಪತಿ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಸಂಗಮೇಶ (28) ಮತ್ತು ಆತನ ಪತ್ನಿ ಹನಮವ್ವ ಸರೂರ್ ಎಂದು ಗುರುತಿಸಲಾಗಿದೆ. ಬೈಕ್ ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ.

ಮೇಲ್ನೋಟಕ್ಕೆ ಬೈಕ್ ಅಪಘಾತವಾಗಿರುವಂತೆ ಕಾಣಿಸುತ್ತಿದೆ ಪಕ್ಕದಲ್ಲೇ ಬೈಕ್‌ ಬಿದ್ದಿದೆ. ಪರಿಶೀಲಿಸಿದಾಗ ಕೊಲೆಯಾಗಿರುವ ಅನುಮಾನ ಹುಟ್ಟುತ್ತದೆ. ಮೃತರಿಬ್ಬರೂ ಖೈರವಾಡಗಿ ಗ್ರಾಮದವರಾಗಿದ್ದು, ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಪಘಾತವೆಂಬಂತೆ ಬಿಂಬಿಸುವ ಪ್ರಯತ್ನ ನಡೆದಿರುವ ಶಂಕೆಯಿದ್ದು, ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Comments are closed.