ಕರ್ನಾಟಕ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರತ್ನ ಪ್ರಭಾ ನೇಮಕ

Pinterest LinkedIn Tumblr


ಬೆಂಗಳೂರು: ಇದೀಗ ರಾಜ್ಯದ ಪ್ರಮುಖ 2 ಹುದ್ದೆಗಳು ಮಹಿಳೆಯರ ಪಾಲಾಗಿದ್ದು, ಡಿಜಿ ಐಜಿಯಾಗಿ ನೀಲಮಣಿ ರಾಜು ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ರತ್ನ ಪ್ರಭಾ ಅವರನ್ನು ರಾಜ್ಯ ಸರ್ಕಾರ ಮಂಗಳವಾರ ನೇಮಕ ಮಾಡಿದೆ.

ರಾಜ್ಯ ಸರ್ಕಾರದ ಆಡಳಿತ ಮುಖ್ಯಸ್ಥರಾದ ಮುಖ್ಯ ಕಾರ್ಯದರ್ಶಿ ಸುಭಾಸ್ ಚಂದ್ರ ಕುಂಟಿಯಾ ನವೆಂಬರ್ 11ಕ್ಕೆ ನಿವೃತ್ತಿಯಾಗಿದ್ದು, ಆ ಹುದ್ದೆಗೆ 1981 ರ ಐಎಎಸ್ ಬ್ಯಾಚ್ ನ ರತ್ನ ಪ್ರಭಾ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ನೀಡಿದೆ. ಸಹಾಯಕ ಮುಖ್ಯ ಕಾರ್ಯದರ್ಶಿಯನ್ನಾಗಿ ವಿಜಯ್‌ ಭಾಸ್ಕರ್‌ ಅವರನ್ನು ನೇಮಕಗೊಳಿಸಲಾಗಿದೆ.

ರತ್ನಪ್ರಭಾ ಅವರ ಸೇವಾವಧಿ ಆರು ತಿಂಗಳು ಮಾತ್ರ ಉಳಿದಿದ್ದು, ಮಾರ್ಚ್ 13 ಕ್ಕೆ ನಿವೃತ್ತಿ ಹೊಂದಲಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿರುವ ಮತ್ತು ಮಹಿಳೆಯಾಗಿರುವ ಕಾರಣಕ್ಕೆ ಹೈದ್ರಾಬಾದ್‌ ಮೂಲದ ರತ್ನಪ್ರಭಾ ಅವರನ್ನೆ ಪರಿಗಣಿಸಲಾಗಿದೆ ಎನ್ನಾಲಾಗಿದೆ .

ಕೇಂದ್ರ ಸರ್ಕಾರದ ಸೇವೆಯಲ್ಲಿದ್ದ ಎಸ್.ಕೆ. ಪಟ್ಟನಾಯಕ್ ಅವರ ಹೆಸರೂ ಕೂಡ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬಂದಿತ್ತು.

-ಉದಯವಾಣಿ

Comments are closed.