ಕರ್ನಾಟಕ

ಬೆಳಗಾವಿ ನಮ್ಮದು: ಗಡಿ ಕ್ಯಾತೆ ತೆಗೆದ ಶಿವಸೇನೆ ಮುಖ್ಯಸ್ಥ ಠಾಕ್ರೆ

Pinterest LinkedIn Tumblr

ಬೆಳಗಾವಿ: ಬೆಳಗಾವಿ ನಮ್ಮದು, ಮರಾಠಿಗರು ವಾಸವಿರುವ ಎಲ್ಲಾ ಭೂಭಾಗ ಮಹಾರಾಷ್ಟ್ರ ರಾಜ್ಯಕ್ಕೆ ಸೇರುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳುವ ಮೂಲಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಮತ್ತೆ ಗಡಿ ಕ್ಯಾತೆಯನ್ನು ತೆಗೆದಿದ್ದಾರೆ.

ರಾಜ್ಯದ ಗಡಿಯಲ್ಲಿರುವ ಮಹಾರಾಷ್ಟ್ರದ ಚಂದಗಡ ತಾಲೂಕಿನ ಸಿನ್ನೊಳ್ಳಿ ಗ್ರಾಮದಲ್ಲಿ ನಿನ್ನೆ ಶಿವಾಜಿ ಪ್ರತಿಮೆ ಉದ್ಘಾಟಿಸಿ ಮಾತನಾಡಿರುವ ಠಾಕ್ರೆಯವರು, ಗಡಿ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶಿವಸೇನೆಯ ಬೆಂಬಲವಿದೆ. ಗಡಿ ವಿಚಾರವಾಗಿ ಎಂತಹ ಹೋರಾಟಕ್ಕಾದರೂ ಶಿವಸೇನೆ ಸಿದ್ಧವಿದೆ ಎಂದು ಹೇಳಿದ್ದಾರೆ.

ಗಡಿ ಇರುವುದು ದೇಶಕ್ಕೆ ಮಾತ್ರ. ಬೆಳಗಾವಿ ಸೇರಿದಂತೆ ಮರಾಠಿಗರು ವಾಸವಾಗಿರುವ ಎಲ್ಲಾ ಭೂಭಾಗ ನಮ್ಮದೇ. ಅಧಿಕಾರಕ್ಕೆ ಬರುವಂತೆ ಜನರು ಮಾಡಿದ್ದೇ ಆದರೆ, ನಮ್ಮ ಪಕ್ಷ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ವಶಕ್ಕೆ ಪಡೆದುಕೊಳ್ಳುತ್ತೇವೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಉದ್ಧವ್ ಠಾಕ್ರೆಯವರ ಈ ಹೇಳಿಕೆಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ವಕ್ತಾರ ರತ್ನಾಕರ್ ಮಹಾಜನ್ ಅವರು, ಶಿವಸೇನೆ ಯಾವಾಗಲೂ ಇಂತಹ ಶೌರ್ಯಪ್ರದರ್ಶನಗಳನ್ನು ಮಾಡುತ್ತಿರುತ್ತದೆ. ಬಾಳ ಠಾಕ್ರೆಯವರು ಇದ್ಧಂತಹ ಸಂದರ್ಭದಲ್ಲಿಯೂ ಇಂತಹದ್ದೇ ವಿಚಾರಗಳ ಕುರಿತಂತೆ ಮಾತನಾಡುತ್ತಿತ್ತು. ಆದರೆ, ಸಮಸ್ಯೆಗಳಿಗೆ ಕಾರ್ಯಸಾಧ್ಯ ಸಮಸ್ಯೆಗಳ ಕುರಿತಂತೆ ಮಾತ್ರ ಮಾತನಾಡುವುದಿಲ್ಲ ಎಂದಿದ್ದಾರೆ.

Comments are closed.