ಕರ್ನಾಟಕ

ವಿಮಾನದ ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ₹91 ಲಕ್ಷ ಮೌಲ್ಯದ ಚಿನ್ನ ಜಪ್ತಿ

Pinterest LinkedIn Tumblr

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ₹91 ಲಕ್ಷ ಮೌಲ್ಯದ ಎರಡು ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ದುಬೈನಿಂದ ನಗರಕ್ಕೆ ಬಂದಿದ್ದ ವಿಮಾನ, ಇಲ್ಲಿಂದ ಜೈಪುರಕ್ಕೆ ಹೊರಡಬೇಕಿತ್ತು. ಅದರಲ್ಲಿ ತಪಾಸಣೆ ನಡೆಸಿದಾಗ ಚಿನ್ನದ ಗಟ್ಟಿಗಳು ಸಿಕ್ಕವು’ ಎಂದು ಕಸ್ಟಮ್ಸ್‌ ಹೆಚ್ಚುವರಿ ಆಯುಕ್ತ ಹರ್ಷ ಉಮ್ರೆ ತಿಳಿಸಿದ್ದಾರೆ.

‘ಜೈಪುರಕ್ಕೆ ಚಿನ್ನ ಸಾಗಿಸುತ್ತಿದ್ದ ಬಗ್ಗೆ ಬಾತ್ಮೀದಾರರೊಬ್ಬರು ಮಾಹಿತಿ ನೀಡಿದ್ದರು. ಜೈಪುರ ವಿಮಾನ ನಿಲ್ದಾಣದ ಶೌಚಾಲಯದ ಕೆಲ ಸ್ವಚ್ಛತಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದೆವು. ಅವರು ಸಾಗಣೆ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಅದರನ್ವಯ ಈ ಕಾರ್ಯಾಚರಣೆ ನಡೆಸಿದೆವು’ ಎಂದರು.

‘ಚಿನ್ನವನ್ನು ಯಾರು ಸಾಗಣೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿಲ್ಲ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರ ಪೂರ್ವಾಪರ ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

ಗುದದ್ವಾರದಲ್ಲಿ ಚಿನ್ನ: ಇನ್ನೊಂದು ಪ್ರಕರಣದಲ್ಲಿ, ಶ್ರೀಲಂಕಾದಿಂದ ನಗರಕ್ಕೆ ಬಂದಿದ್ದ ತಾಜೋನ್ ಮಹಮ್ಮದ್ ಎಂಬುವರನ್ನು ಬಂಧಿಸಿರುವ ಕಸ್ಟಮ್ಸ್‌ ಅಧಿಕಾರಿಗಳು, ಅವರು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ ₹6.04 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಜಪ್ತಿ ಮಾಡಿದ್ದಾರೆ.

Comments are closed.